Tuesday, May 18, 2021
Homeಸುದ್ದಿ ಜಾಲರೆಮ್‌ಡಿಸಿವಿರ್ ಸಾಗಿಸುವಾಗ‌ ಆಯಂಬುಲೆನ್ಸ್ ಚಾಲಕ ಸೆರೆ

ಇದೀಗ ಬಂದ ಸುದ್ದಿ

ರೆಮ್‌ಡಿಸಿವಿರ್ ಸಾಗಿಸುವಾಗ‌ ಆಯಂಬುಲೆನ್ಸ್ ಚಾಲಕ ಸೆರೆ

ರಾಯಚೂರು: ರೆಮ್‌ಡಿಸಿವಿರ್ ಚುಚ್ಚುಮದ್ದನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ನಗರದ ಓಪೆಕ್ ಆಸ್ಪತ್ರೆಯ ಆಯಂಬುಲನ್ಸ್ ಚಾಲಕನನ್ನು ಸಾರ್ವಜನಿಕರೆ ಸೆರೆಹಿಡಿದಿರುವ ವಿಡಿಯೊ ವೈರಲ್‌ ಆಗಿದೆ.

ಆಸ್ಪತ್ರೆಯ ಕೋವಿಡ್ ವಾರ್ಡ್ ಬಳಿ ಭಾನುವಾರ ‌ಬೆಳಿಗ್ಗೆ ಘಟನೆ ನಡೆದಿದೆ.

ಜನಸಂಗ್ರಾಮ ಪರಿಷತ್ ಮುಖಂಡ ಖಾಜಾ ಅಸ್ಲಂ ಪಾಷಾ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದನ್ನು ಆಧರಿಸಿ,ಆಯಂಬುಲನ್ಸ್ ಚಾಲಕ ಬಂದೆಪ್ಪನನ್ನು ರಿಮ್ಸ್ ವೈದ್ಯಕೀಯ ಕಾಲೇಜು ಡೀನ್ ಅಮಾನತುಗೊಳಿಸಿದ್ದಾರೆ. ಇಲಾಖಾ ತನಿಖೆಗೆ ಸೂಚಿಸಲಾಗಿದೆ.

ರೆಮ್‌ಡಿಸಿವಿರ್ ಎರಡು ಶೀಸೆಗಳನ್ನು ಜೇಬಿನಲ್ಲಿ ಇಟ್ಟುಕೊಂಡು ತೆರಳುತ್ತಿದ್ದ ವೇಳೆ ಜನರು ಆತನನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ‌ ಅಕ್ರಮ ಬಯಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img