Tuesday, May 11, 2021
Homeಕೋವಿಡ್-19ಮಹಾಮಾರಿ ಕೊರೊನಾಗೆ ಪೊಲೀಸ್ ಕಾನ್ಸ್ ಟೇಬಲ್ ಬಲಿ

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಪೊಲೀಸ್ ಕಾನ್ಸ್ ಟೇಬಲ್ ಬಲಿ

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಯಾದಗಿರಿ ಜಿಲ್ಲೆಯ ಶಹಾಪುರ ನಗರ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಶರಣಪ್ಪ ಮೃತಪಟ್ಟಿದ್ದಾರೆ.

ಮೃತ ಕಾನ್ಸ್‌ಟೇಬಲ್ ಶರಣಪ್ಪಗೆ 28 ವರ್ಷವಾಗಿತ್ತು.
ಹಲವಾರು ವರ್ಷಗಳಿಂದ ಶಹಾಪುರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶರಣಪ್ಪ ಕಳೆದ ವಾರ ಅನಾರೋಗ್ಯದಿಂದ ಕೆಲಸಕ್ಕೆ ರಜೆ ಹಾಕಿದ್ದರು.

ಮೊದಲಿಗೆ ಕಲ್ಬುರ್ಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಶರಣಪ್ಪ, ಅಲ್ಲಿ ಚಿಕಿತ್ಸೆ ಸಮರ್ಪಕವಾಗಿ ಇಲ್ಲದ ಕಾರಣ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಇಂದು ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಶರಣಪ್ಪ ಸಾವನ್ನಪ್ಪಿದ್ದಾರೆ. ಇವರ ಸಾವಿನಿಂದ ಯಾದಗಿರಿಯ ಶಹಾಪುರ ಪೊಲೀಸ್ ಇಲಾಖೆಯಲ್ಲಿ ತೀವ್ರ ಆತ‌ಂಕ ಮನೆ ಮಾಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img