Thursday, July 29, 2021
Homeಕೋವಿಡ್-19ಚಾಮರಾಜನಗರ: ಒಂದೇ ದಿನ 283 ಕೊರೊನಾ ಪ್ರಕರಣ ದೃಢ, ಮೂರು ಸಾವು

ಇದೀಗ ಬಂದ ಸುದ್ದಿ

ಚಾಮರಾಜನಗರ: ಒಂದೇ ದಿನ 283 ಕೊರೊನಾ ಪ್ರಕರಣ ದೃಢ, ಮೂರು ಸಾವು

ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ 283 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಮೂರು ಸಾವು ಸಂಭವಿಸಿವೆ. 82 ಮಂದಿ ಗುಣಮುಖರಾಗಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 1,492ಕ್ಕೆ ಏರಿದೆ. ಸೋಂಕಿತರ ಪೈಕಿ 1097 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಐಸಿಯುನಲ್ಲಿ 58 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಳಂದೂರು ಪಟ್ಟಣ ನಿವಾಸಿ 56 ವರ್ಷದ ಮಹಿಳೆ ಶನಿವಾರ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸಿದೆ ಅದೇ ದಿನ ಮೃತಪಟ್ಟಿದ್ದಾರೆ. ಕೊಳ್ಳೇಗಾಲದ 71 ವರ್ಷ ವೃದ್ಧರೊಬ್ಬರು 20ರಂದು ದಾಖಲಾಗಿದ್ದರು. ಶನಿವಾರ ಕೊನೆಯುಸಿರೆಳೆದಿದ್ದಾರೆ. ಕೊಳ್ಳೇಗಾಲ ತಾಲ್ಲೂಕಿನ ಬೂದಿತಿಟ್ಟು ಗ್ರಾಮದ 45 ವರ್ಷದ ಪುರುಷ ಶನಿವಾರ ದಾಖಲಾಗಿದ್ದು, ಅದೇ ದಿನ ನಿಧನರಾಗಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 125ಕ್ಕೆ ಏರಿದೆ. 20 ಮಂದಿ ಅನ್ಯ ಕಾರಣಗಳಿಂದ ನಿಧನರಾಗಿದ್ದಾರೆ.

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 9,315ಕ್ಕೆ ಏರಿದೆ. 7,678 ಮಂದಿ ಗುಣಮುಖರಾಗಿದ್ದಾರೆ.

ಭಾನುವಾರ 1,432 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 1,140 ಮಂದಿಯ ವರದಿ ನೆಗೆಟಿವ್‌ ಬಂದಿವೆ. 292 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ, ಎಂಟು ಪ್ರಕರಣಗಳು ಬೇರೆ ಜಿಲ್ಲೆಯವು. ಒಂದು ಪ್ರಕರಣದ ವಿವರ ಇನ್ನಷ್ಟೆ ತಿಳಿಯಬೇಕಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು

ಈ ಮಧ್ಯೆ, ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಭಾನುವಾರ ದೃಢಪಟ್ಟ 283 ಪ್ರಕರಣಗಳ ಪೈಕಿ 209 ಪ್ರಕರಣಗಳು ಗ್ರಾಮೀಣ ಭಾಗಗಳಲ್ಲಿ ವರದಿಯಾಗಿವೆ. ಈ ಪೈಕಿ 122 ಪುರುಷರು, 74 ಮಹಿಳೆಯರು ಹಾಗೂ 13 ಮಕ್ಕಳಿಗೆ ಸೋಂಕು ತಗುಲಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img