Tuesday, May 18, 2021
Homeಅಂತರ್ ರಾಜ್ಯಉತ್ತರಾಖಂಡ ಹಿಮಪಾತ: ಮೃತರ ಸಂಖ್ಯೆ 11ಕ್ಕೆ ಏರಿಕೆ

ಇದೀಗ ಬಂದ ಸುದ್ದಿ

ಉತ್ತರಾಖಂಡ ಹಿಮಪಾತ: ಮೃತರ ಸಂಖ್ಯೆ 11ಕ್ಕೆ ಏರಿಕೆ

ಗೋಪೇಶ್ವರ: ‘ಉತ್ತರಾಖಂಡದ ಚಮೋಲಿ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಚೀನಾ ಗಡಿ ಸಮೀಪ ಸಂಭವಿಸಿದ ಹಿಮಪಾತದಲ್ಲಿ ಸಾವಿಗೀಡಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

‘ಶನಿವಾರದ ವೇಳೆಗೆ 10 ಮೃತದೇಹಗಳನ್ನು ಪತ್ತೆ ಮಾಡಲಾಗಿತ್ತು. ಭಾನುವಾರ ಮತ್ತೊಂದು ಶವ ಸಿಕ್ಕಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಜಿಲ್ಲೆಯ ವಿಪತ್ತು ನಿರ್ವಹಣಾ ಕಚೇರಿ ತಿಳಿಸಿದೆ.

ಚಮೋಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಸ್ವಾತಿ ಎಸ್‌.ಭಧೌರಿಯಾ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಯಶವಂತ್‌ ಸಿಂಗ್‌ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

‘ಶುಕ್ರವಾರ ಹಿಮಪಾತ ಸಂಭವಿಸಿದಾಗ 430 ಬಾರ್ಡರ್‌ ರೋಡ್‌ ಆರ್ಗನೈಜೇಶನ್‌ (ಬಿಆರ್‌ಒ) ಕಾರ್ಮಿಕರು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು’ ಎಂದು ಉತ್ತರಾಖಂಡದ ಪೊಲೀಸ್‌ ಮುಖ್ಯಸ್ಥ ಅಶೋಕ್‌ ಕುಮಾರ್‌ ಅವರು ತಿಳಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img