Tuesday, May 18, 2021
Homeಸುದ್ದಿ ಜಾಲದೆಹಲಿಯಲ್ಲಿ ಕೊರೋನಾ ಅಟ್ಟಹಾಸ : 40 ಮಂದಿ ಸೋಂಕಿತರಿಗೆ ಆಕ್ಸಿಜನ್ ಅವಶ್ಯಕತೆ

ಇದೀಗ ಬಂದ ಸುದ್ದಿ

ದೆಹಲಿಯಲ್ಲಿ ಕೊರೋನಾ ಅಟ್ಟಹಾಸ : 40 ಮಂದಿ ಸೋಂಕಿತರಿಗೆ ಆಕ್ಸಿಜನ್ ಅವಶ್ಯಕತೆ

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ನಿಂದ ಮೃತಪಟ್ಟರ ಸಂಖ್ಯೆ ಏರಿಕೆಯಾಗುತ್ತಿದೆ. ಆಮ್ಲಜನಕದ ಕೊರತೆಯಿಂದ ದೆಹಲಿ ಆಸ್ಪತ್ರೆಗಳಲ್ಲಿ ಜನರು ಉಸಿರಾಟದ ತೊಂದರೆಯಿಂದಲೇ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ.

ನಿನ್ನೆ ಒಂದೇ ದಿನ 357 ಮಂದಿ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ. ದೆಹಲಿಯಲ್ಲಿ ಆಕ್ಸಿಜನ್‌ ಕೊರತೆ ಹೆಚ್ಚಾಗಿದ್ದು, ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ಪೂರೈಸುವಂತೆ ಅಲ್ಲಿನ ಆಸ್ಪತ್ರೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಬೇಡಿಕೊಳ್ಳುತ್ತಿವೆ.

ದೆಹಲಿಯ ಪೆನತಾಮೆಡ್‌ ಆಸ್ಪತ್ರೆಯಲ್ಲಿ 50 ಮಂದಿ ಸೋಂಕಿತರಿಗೆ ಆಮ್ಲಜನಕದ ತುರ್ತು ಅವಶ್ಯಕತೆ ಇದೆ. ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ಮ್ಯಾನೇಜರ್‌ ದೀಪಕ್‌ ಸೇಥಿ, 50 ಸಿಲಿಂಡರ್‌ಗಳನ್ನು ರಿಫಿಲ್‌ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಆದ್ರೆ ಒಂದೂ ಸಿಲಿಂಡರ್‌ಗೂ ಆಕ್ಸಿಜನ್‌ ತುಂಬಿಸಲು ಸಾಧ್ಯವಾಗಿಲ್ಲ. ದೆಹಲಿ ಹಾಗೂ ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡಬೇಕು ಎಂದು ಕೋರಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img