Tuesday, May 11, 2021
Homeಸುದ್ದಿ ಜಾಲಮಹಾರಾಷ್ಟ್ರ : ಮದ್ಯ ಸಿಗದೆ ಸ್ಯಾನಿಟೈಜರ್ ಕುಡಿದು ಏಳು ಜನರು ಸಾವು!

ಇದೀಗ ಬಂದ ಸುದ್ದಿ

ಮಹಾರಾಷ್ಟ್ರ : ಮದ್ಯ ಸಿಗದೆ ಸ್ಯಾನಿಟೈಜರ್ ಕುಡಿದು ಏಳು ಜನರು ಸಾವು!

ಮುಂಬೈ : ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಮಹಾರಾಷ್ಟ್ರ ಸರ್ಕಾರ ಈಗಾಗಲೇ ಲಾಕ್ ಡೌನ್ ಹೇರಿದೆ. ಈ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಮುಚ್ಚಿದ್ದರಿಂದ ಮದ್ಯ ಸಿಗದೇ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಯವತ್ ಮಲ್ ಜಿಲ್ಲೆಯ ವಣಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇವರೆಲ್ಲರೂ ಕೂಲಿ ಕಾರ್ಮಿಕರು. ಅವರು ಮದ್ಯ ಪಡೆಯಲು ಸಾಧ್ಯವಾಗದಿದ್ದಾಗ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿದರು ಎಂದು ವಾನಿ ಪೊಲೀಸ್ ಠಾಣೆಯ ಉಪ ವಿಭಾಗಾಧಿಕಾರಿ ಅಜಯ್ ಪೂಜಾಲ್ವರ್ ಹೇಳಿದ್ದಾರೆ.

ಯವತ್ಮಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ. ಕೊರೊನಾ ವೈರಸ್ ಪ್ರಕರಣಗಳು ತ್ವರಿತವಾಗಿ ಹೆಚ್ಚುತ್ತಿರುವ ಮಧ್ಯೆ ಮಹಾರಾಷ್ಟ್ರ ಸರ್ಕಾರ ಗುರುವಾರ ಕಠಿಣ ನಿರ್ಬಂಧಗಳನ್ನು ಹೇರಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img