Tuesday, May 18, 2021
Homeಸುದ್ದಿ ಜಾಲರೈಲ್ವೆ ಇಲಾಖೆಯ 93 ಸಾವಿರ ಸಿಬ್ಬಂದಿಗೆ ಕೊರೊನಾ ಸೋಂಕು!

ಇದೀಗ ಬಂದ ಸುದ್ದಿ

ರೈಲ್ವೆ ಇಲಾಖೆಯ 93 ಸಾವಿರ ಸಿಬ್ಬಂದಿಗೆ ಕೊರೊನಾ ಸೋಂಕು!

ನವದೆಹಲಿ : ದೇಶದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ದಾಖಲೆಯ ಏರಿಕೆಯ ನಡುವೆ, ಭಾರತೀಯ ರೈಲ್ವೆಯ ಸುಮಾರು 93,000 ಉದ್ಯೋಗಿಗಳಿಗೆ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಮತ್ತು ಸಿಇಒ ಸುನೀತ್ ಶರ್ಮಾ ಶುಕ್ರವಾರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನೀತ್ ಶರ್ಮಾ, ರೈಲ್ವೆಯು ಭಿನ್ನವಾಗಿಲ್ಲ. ಸುಮಾರು 93,000 ರೈಲ್ವೆ ಉದ್ಯೋಗಿಗಳು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ಭಾರತೀಯ ರೈಲ್ವೆಯ 72 ಆಸ್ಪತ್ರೆಗಳಲ್ಲಿ ಸೋಂಕಿತರಿಗೆ 5,೦೦೦ ಕ್ಕೂ ಹೆಚ್ಚು ಹಾಸಿಗೆಗಳನ್ನು ಮೀಸಲಿಡಲಾಗಿದೆ ಹೇಳಿದರು.

ಕೋವಿಡ್-19 ಸೋಂಕಿತರಾದ ಎಲ್ಲರಿಗೂ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ, ಕೆಲವರು ಕ್ವಾರಂಟೈನ್ ಅಥವಾ ಪ್ರತ್ಯೇಕತೆಯಲ್ಲಿದ್ದಾರೆ ಎಂದು ಅವರು ಹೇಳಿದರು.’ರೈಲ್ವೆಯ ಮುಂಚೂಣಿ ಕಾರ್ಯಕರ್ತರಾದ ಜನರು, ನಿರ್ವಹಣೆದಾರರು, ಚಾಲಕರು, ಟಿಟಿಗಳು, ನಿಲ್ದಾಣದ ಸಿಬ್ಬಂದಿಯೊಂದಿಗೆ ನಾವು ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಅವರು ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img