Sunday, May 9, 2021
Homeಅಂತರ್ ರಾಜ್ಯಉತ್ತರಾಖಂಡ್ ಹಿಮಸ್ಫೋಟ : 8 ಮಂದಿ ಸಾವು, 438 ಜನರ ರಕ್ಷಣೆ

ಇದೀಗ ಬಂದ ಸುದ್ದಿ

ಉತ್ತರಾಖಂಡ್ ಹಿಮಸ್ಫೋಟ : 8 ಮಂದಿ ಸಾವು, 438 ಜನರ ರಕ್ಷಣೆ

ಬಗ್ಗೆ ಟ್ವೀಟ್ ಮಾಡಿದ್ದು, ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ. ಹಾಗೇ, ಗೃಹ ಸಚಿವರು ಕರೆ ಮಾಡಿ ಸ್ಥಳದ ಪರಿಸ್ಥಿತಿ ಬಗ್ಗೆ ವರದಿ ಪಡೆದಿದ್ದಾರೆ. ಎಲ್ಲ ರೀತಿಯ ಸಹಾಯ ಮಾಡುವ ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಉತ್ತರಾಖಂಡದ ಸುಮ್ನಾಕ್ಕಿಂತ 4 ಕಿ.ಮೀ ದೂರದಲ್ಲಿರುವ ಸುಮ್ನಾ-ರಿಮ್ಖಿಮ್ ರಸ್ತೆಯಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಹಿಮಪಾತವಾಗಿದ್ದು, ಈ ಪ್ರದೇಶದಲ್ಲಿ ಕಳೆದ ಐದು ದಿನಗಳಿಂದ ಭಾರಿ ಮಳೆ ಮತ್ತು ಹಿಮಪಾತವಾಗುತ್ತಿದೆ.

ಮಾಹಿತಿಯ ಪ್ರಕಾರ, ಹಿಮಪಾತವಾದ ತಕ್ಷಣವೇ ಭಾರತೀಯ ಸೇನೆಯು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಎರಡೂ ಶಿಬಿರಗಳಲ್ಲಿ ಇತರ ಕಾರ್ಮಿಕರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಮುಂದುವರೆದಿದೆ, ಆದರೆ, ಈವರೆಗೆ ಎಂಟು ಶವಗಳನ್ನು ಹೊರಗೆ ತೆಗೆಯಲಾಗಿದೆ.

ಇದೀಗ ಎರಡೂವರೆ ತಿಂಗಳ ನಂತರ ಶುಕ್ರವಾರ ಸಂಜೆ ಮತ್ತೆ ಹಿಮಸ್ಫೋಟ ಸಂಭವಿಸಿರುವುದಾಗಿ ತಿಳಿದುಬಂದಿದೆ. ಆದರೆ ಹಿಮಸ್ಫೋಟಕ್ಕೆ ಕಾರಣವೇನು, ಸ್ಫೋಟದಿಂದಾಗಿ ಸಂಭವಿಸಿರುವ ಹಾನಿಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img