Tuesday, May 11, 2021
Homeಸುದ್ದಿ ಜಾಲಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 13 ಸೋಂಕಿತರು ಸಜೀವ ದಹನ

ಇದೀಗ ಬಂದ ಸುದ್ದಿ

ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 13 ಸೋಂಕಿತರು ಸಜೀವ ದಹನ

ಮುಂಬೈ: ಮಹಾರಾಷ್ಟ್ರದ ಪಲ್ಘಾರ್​ ಜಿಲ್ಲೆಯ ವಾಸೈನಲ್ಲಿರುವ ಕೋವಿಡ್​ ಕೇಂದ್ರದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡದಲ್ಲಿ 13 ಸೋಂಕಿತರು ಸಜೀವ ದಹನವಾಗಿದ್ದಾರೆ.

ವಾಸೈ ವಿರಾರ್ ಮುನ್ಸಿಪಲ್ ಕಾರ್ಪೊರೇಶನ್​ನ ಕರೋನಾ ನಿಯಂತ್ರಣ ಕೊಠಡಿಯಲ್ಲಿ ದುರ್ಘಟನೆ ಸಂಭವಿಸಿದೆ.

ವಿರಾರ್ ಪಶ್ಚಿಮದಲ್ಲಿರುವ ವಿಜಯ್ ವಲ್ಲಭ್ ಆಸ್ಪತ್ರೆಯಲ್ಲಿ 15 ರೋಗಿಗಳು ಐಸಿಯುನಲ್ಲಿದ್ದರು. ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಎಸಿ ಶಾರ್ಟ್​ ಸೆರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ನಂಬಲಾಗಿದೆ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸ್ನೇಹಿತರೊಬ್ಬರ ಕರೆ ಸ್ವೀಕರಿಸಿದೆ. ಅವರ ಅತ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ಕೇಳಿ ಅಲ್ಲಿಗೆ ಹೋಗುವಷ್ಟರಲ್ಲಿ ಆಸ್ಪತ್ರೆ ಹೊರಭಾಗದಲ್ಲಿ ಅಗ್ನಿಶಾಮಕ ವಾಹನಗಳು ನಿಂತಿದ್ದವು. ಕಟ್ಟಡದ ಎರಡನೇ ಮಹಡಿಯಲ್ಲಿರುವ ಐಸಿಯು ಕೇರ್​ ಹೊಗೆಯಿಂದ ಆವರಿಸಿತ್ತು. ಅಲ್ಲಿ ಇಬ್ಬರು ನರ್ಸ್​ಗಳು ಮಾತ್ರ ಇದ್ದರು. ವೈದ್ಯರನ್ನು ನೋಡಲು ಆಗಲಿಲ್ಲ. ಬೆಂಕಿಯನ್ನು ಹೋಗಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸುಮಾರು ಅರ್ಧ ಗಂಟೆ ಬೇಕಾಯಿತು. ಬಳಿಕ ಅಲ್ಲಿಯೇ 8 ಮೃತದೇಹಗಳು ಪತ್ತೆಯಾಯಿತು ಎಂದು ಪ್ರತ್ಯಕ್ಷದರ್ಶಿ ಅವಿನಾಶ್​ ಪಾಟೀಲ್​ ಎಂಬುವರು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img