Sunday, May 9, 2021
Homeರಾಜ್ಯಚಿನ್ನ, ಬಟ್ಟೆ ಅಂಗಡಿ ಮುಚ್ಚಿಸುವ ನಿರ್ಧಾರ ಕೈಬಿಡಿ; ಟಿ ಎ ಶರವಣ ಮನವಿ

ಇದೀಗ ಬಂದ ಸುದ್ದಿ

ಚಿನ್ನ, ಬಟ್ಟೆ ಅಂಗಡಿ ಮುಚ್ಚಿಸುವ ನಿರ್ಧಾರ ಕೈಬಿಡಿ; ಟಿ ಎ ಶರವಣ ಮನವಿ

ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ಚಿನ್ನ, ಬಟ್ಟೆ ಅಂಗಡಿ ಮುಚ್ಚಿಸುವ ನಿರ್ಧಾರ ಕೈಬಿಡಿ ಎಂದು ಮಾಜಿ ಎಂಎಲ್​ಸಿ ಟಿ.ಎ.ಶರವಣ ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ. ಟ್ವೀಟ್ ಮೂಲಕ ಮನವಿ ಮಾಡಿರುವ ಅವರು, ಮದುವೆ ಸಮಯದಲ್ಲಿ ಬಟ್ಟೆ ಮತ್ತು ಚಿನ್ನದ ಅಂಗಡಿಗಳನ್ನು ಮುಚ್ಚಿಸಿದರೆ ಸಮಸ್ಯೆ ಸೃಷ್ಟಿಯಾಗಲಿದೆ. ಹೀಗಾಗಿ ಕೊವಿಡ್ ನಿಯಮಗಳನ್ನು ಪಾಲಿಸುತ್ತೇವೆ ಬಟ್ಟೆ, ಚಿನ್ನದ ಅಂಗಡಿ ತೆರೆಯಲು ಅನುಮತಿ ನೀಡಿ ಎಂದು ಮಾಜಿ ಎಂಎಲ್​ಸಿ ಟಿ.ಎ.ಶರವಣ ಮನವಿ ಮಾಡಿಕೊಂಡಿದ್ದಾರೆ.

ಮಾರ್ಗಸೂಚಿ ಪ್ರಕಾರವೇ ಬಟ್ಟೆ ಮತ್ತು ಚಿನ್ನದ ಅಂಗಡಿಗಳಲ್ಲಿ ವ್ಯವಹಾರ ನಡೆಯಲಿದೆ. ಇದರಿಂದ ಸರ್ಕಾರಕ್ಕೂ ದೊಡ್ಡ ಮಟ್ಟದ ಆದಾಯ ಬರಲಿದೆ. ಏಕಾಏಕಿ ಸರ್ಕಾರಕೈಗೊಂಡ ನಿರ್ಧಾರದಿಂದ ಇಡೀ ಉದ್ಯಮ ಮತ್ತು ವಿವಾಹಕ್ಕೆ ತಯಾರಿ ಮಾಡಿಕೊಂಡವರಿಗೆ ಶಾಕ್ ಆಗಿದೆ. ಮದುವೆ ಸಮಯದಲ್ಲಿ ಕೂಡಲೇ ಚಿನ್ನದ ಅಂಗಡಿಗಳು ಮತ್ತು ಬಟ್ಟೆ ಅಂಗಡಿಗಳನ್ನು ಕೋರೋನಾ ಮಾರ್ಗಸೂಚಿ ಪ್ರಕಾರ ನಡೆಸಲು ಅವಕಾಶ ಕೊಡಿ ಎಂದು ಅವರು ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರದಿಂದ ಕೊವಿಡ್ 19 ಸೋಂಕು ತಡೆಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ವಿವಿಧ ನಗರಗಳಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಬಂದ್‌ ಮಾಡಲಾಗುತ್ತಿದೆ. ಬೆಂಗಳೂರಿನ ಚಿಕ್ಕಪೇಟೆ, ಮೆಜೆಸ್ಟಿಕ್,ಮೈಸೂರು ದಾವಣಗೆರೆ ಮಂಡ್ಯ ಸೇರಿದಂತೆ ಹಲವೆಡೆ ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಬಂದ್‌ ಮಾಡಲಾಗುತ್ತಿದೆ. ವಾರಾಂತ್ಯದ ಕರ್ಫ್ಯೂ ನಾಳೆ ಸಂಜೆಯಿಂದ ಜಾರಿಗೆ ಬರಲಿದ್ದರೂ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಬಟ್ಟೆ ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ.

ಮೇ 4ರವರೆಗೆ ಬಟ್ಟೆ ಅಂಗಡಿ ತೆರೆಯದಂತೆ ಸೂಚಿಸಿದ್ದಾರೆ ಎಂದು ಬೆಂಗಳೂರಿನ ಚಿಕ್ಕಪೇಟೆಯ ಬಟ್ಟೆ ಅಂಗಡಿ ವ್ಯಾಪಾರಿ ಹೇಳಿದ್ದಾರೆ. ಅಂಗಡಿ ಮುಚ್ಚಿಸಲು ಆದೇಶ ಬಂದಿದೆ. ಹೀಗಾಗಿ ಬಟ್ಟೆ ಅಂಗಡಿ ಮುಚ್ಚಿಸುತ್ತಿದ್ದೇವೆ. ಅಂಗಡಿ ಮುಚ್ಚದಿದ್ದರೆ ಪೊಲೀಸ್ ಠಾಣೆಗೆ ಬನ್ನಿ ಎಂದು ಪೊಲೀಸರು ತಿಳಿಸಿದ್ದಾರೆ.ಯಾವ ಅಂಗಡಿಗಳಿಗೂ ಇಲ್ಲದ ರೂಲ್ಸ್ ನಮಗೆ ಮಾತ್ರ ಏಕೆ ಎಂದು ಸದ್ಯ ಚಿಕ್ಕಪೇಟೆಯ ಬಟ್ಟೆ ಅಂಗಡಿ ವ್ಯಾಪಾರಿ ಅಳಲು ತೋಡಿಕೊಂಡಿದ್ದಾರೆ. ಬಟ್ಟೆ ಅಂಗಡಿಗಳನ್ನ ಮಾತ್ರ ಯಾಕೆ ಬಂದ್ ಮಾಡಬೇಕು. ಇದ್ದಕ್ಕಿದ್ದಂತೆ ಹೀಗೆ ಹೇಳಿದರೆ ಏನು ಮಾಡುವುದು ಎಂದು ಅವೆನ್ಯೂ ರಸ್ತೆಯ ಬಟ್ಟೆ ಮಾರಾಟ ಮಾಡುವ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಅಂಗಡಿಗಳನ್ನು ಮುಚ್ಚಿಸುತ್ತಿರುವ ಕುರಿತು ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img