Sunday, May 9, 2021
Homeರಾಜ್ಯರಾಜ್ಯ ಸರ್ಕಾರದಿಂದ 'ನೈಟ್ ಅಂಡ್ ವೀಕ್ ಎಂಡ್ ಕರ್ಪ್ಯೂ' ಪರಿಷ್ಕೃತ ಮಾರ್ಗಸೂಚಿ ರಿಲೀಸ್

ಇದೀಗ ಬಂದ ಸುದ್ದಿ

ರಾಜ್ಯ ಸರ್ಕಾರದಿಂದ ‘ನೈಟ್ ಅಂಡ್ ವೀಕ್ ಎಂಡ್ ಕರ್ಪ್ಯೂ’ ಪರಿಷ್ಕೃತ ಮಾರ್ಗಸೂಚಿ ರಿಲೀಸ್

ಬೆಂಗಳೂರು : ರಾಜ್ಯ ಸರ್ಕಾರ ನಿನ್ನೆ ಬಿಡುಗಡೆ ಮಾಡಿರುವಂತ ಕೊರೋನಾ ನೈಟ್ ಕಪ್ಯೂ ಹಾಗೂ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಿದೆ. ಈ ಮೊದಲು ಅಗತ್ಯ ವಸ್ತು ಸೇವೆ ಜೊತೆಗೆ, ಇತರೆ ಶಾಪ್ ಗಳಿಗು ತೆರೆಯಲು ಅನುಮತಿ ನೀಡಿತ್ತು. ಆದ್ರೇ.. ಇಂದು ದಿಢೀರ್ ಶಾಕ್ ನೀಡುವಂತೆ ಪರಿಷ್ಕೃತ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಈ ಮಾರ್ಗಸೂಚಿಯಂತೆ, ಈಗ ಅಗತ್ಯಸೇವೆ ಒದಗಿಸುವಂತ ಶಾಪ್ ಹೊರತಾಗಿ ಎಲ್ಲಾ ಶಾಪ್ ಬಂದ್ ಮಾಡುವಂತೆ ಸೂಚಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಸುತ್ತೋಲೆ ಹೊರಡಿಸಿದ್ದು, ಏಪ್ರಿಲ್ 21ರಿಂದ ಮೇ.4ರವರೆಗೆ ಹಗಲು ಹೊತ್ತು ಸೇರಿದಂತೆ ವೀಕ್ ಎಂಡ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ವಾರಾಂತ್ಯ ಕರ್ಪ್ಯೂ, ರಾತ್ರಿ ಕರ್ಪ್ಯೂ ಸೇರಿದಂತೆ ಸಾರ್ವಜನಿಕರ ಸುರಕ್ಷತೆಗಾಗಿ ವಿಧಿಸಲಾಗಿರುವ ಎಲ್ಲಾ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಲುವಂತೆ ಸೂಚಿಸಿದ್ದಾರೆ. ಹಾಗಾದ್ರೇ.. ರಾತ್ರಿ ಕರ್ಪ್ಯೂ, ವಾರಾಂತ್ಯ ಕರ್ಪ್ಯೂ ವೇಳೆ ಯಾವುದಕ್ಕೆ ಅನುಮತಿ.? ಯಾವುದಕ್ಕೆ ಇಲ್ಲ.? ಇಲ್ಲಿದೆ ಸಂಪೂರ್ಣ ಮಾಹಿತಿ.

ಯಾವುದಕ್ಕೆ ಅನುಮತಿ

 • ಕೋವಿಡ್ ಸುರಕ್ಷಾ ನಿಯಮಗಳೊಂದಿಗೆ ಎಲ್ಲಾ ಬಗೆಯ ನಿರ್ಮಾಣ, ದುರಸ್ತಿ ಚಟುವಟಿಕೆಗಳಿಗೆ ಅನುಮತಿ
 • ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳಿಗೂ ಯಾವುದೇ ನಿರ್ಬಂಧವಿಲ್ಲ
 • ಎಲ್ಲಾ ಬಗೆಯ ಕೈಗಾರಿಕೆಗಳು, ಸಂಸ್ಥೆಗಳು, ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸಬಹುದು
 • ಸಿಬ್ಬಂದಿ ಓಡಾಟಕ್ಕೆ ಸಂಸ್ಥೆಗಳಿಂದ ಪಡೆದುಕೊಂಡ ಐಡಿ ಕಾರ್ಡ್ ತೋರಿಸುವುದು ಕಡ್ಡಾಯ
 • ಪಡಿತರ ಅಂಗಡಿ ಹಾಗೂ ದಿನಸಿ, ಹಣ್ಣು ತರಕಾರಿ, ಹಾಲಿನ ಬೂತ್, ಮೀನು-ಮಾಂಸ, ಪಶು ಆಹಾರ ಅಂಗಡಿಗಳ ಸೇವೆ ಅಭಾಧಿತ
 • ಮೈದಾನ ಇಲ್ಲವೇ ತೆರೆದ ಪ್ರದೇಶದಲ್ಲಿ ಮಾತ್ರ ಸಗಟು ತರಕಾರಿ, ಹಣ್ಣು, ಹೂಪಿನ ವ್ಯಾಪಾರ ನಡೆಸಲು ಅನುಮತಿ. ಕಟ್ಟಡದಲ್ಲಿ ನಡೆಸುವಂತಿಲ್ಲ
 • ಬ್ಯಾಂಕ್, ವಿಮಾ ಕಚೇರಿ, ಎಟಿಎಂ, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ, ಷೇರು ವಿನಿಮಯ ಸೇವಾ ಕೇಂದ್ರಗಳಿಗೆ ಅವಕಾಶ
 • ಮದುವೆ ಸಮಾರಂಭಗಳಿಗೆ ಕೇವಲ 50 ಜನರಿಕೆ ಅವಕಾಶ
 • ಅಂತ್ಯಕ್ರಿಯೆಯಲ್ಲಿ 20 ಜನರಿಗೆ ಮಾತ್ರ ಅವಕಾಶ
 • ರಾಜ್ಯದೊಳಗೆ ವ್ಯಕ್ತಿಗಳ ಸಂಚಾರ ಹಾಗೂ ಸರಕು ಸಾಗಾಣಿಕೆ ಮುಕ್ತ ಅವಕಾಶ. ಯಾವುದೇ ಪೂರ್ವಾನುಮತಿ ಬೇಕಿಲ್ಲ
 • ಮೆಟ್ರೋ, ಬಸ್, ಕ್ಯಾಬ್, ಆಟೋ ಸಂಚಾರಕ್ಕೆ ಅವಕಾಶ. ಒಟ್ಟು ಆಸನ ಸಾಮರ್ಥ್ಯ ಶೇ.50 ಮಾತ್ರ
 • ಶನಿವಾರ ಮತ್ತು ಭಾನುವಾರ ದಿನಸಿ, ತರಕಾರಿ, ಹಾಲು, ಅಂಗಡಿಗಳು ಬೆಳ್ಳಗೆ 6 ರಿಂದ 10ರವರೆಗೆ ಮಾತ್ರ ತೆರದಿಯಲು ಅವಕಾಶ

ಯಾವುದಕ್ಕೆ ನಿರ್ಬಂಧ

 • ಶಾಲೆ ಕಾಲೇಜು, ಕೋಚಿಂಗ್ ಸೆಂಟರ್, ತರಬೇತಿ ಕೇಂದ್ರ ಬಂದ್
 • ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಸ್ಪಾ, ಈಜುಕೊಳ, ಕ್ರೀಡಾ ಸಂಕೀರ್ಣ, ಅಮ್ಯಾಸ್ ಮೆಂಟ್ ಪಾರ್ಕ್, ಸಭಾಂಗಣ, ಅಸೆಂಬ್ಲಿ ಹಾಲ್ ಬಂದ್
 • ಎಲ್ಲ ಬಗೆಯ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧ. ಆದ್ರೇ ದೈನಂದಿನ ಪೂಜಾ ಕೈಂಕರ್ಯಕ್ಕೆ ತಡೆ ಇಲ್ಲ
 • ಹೋಟೆಲ್, ರೆಸ್ಟೋರೆಂಟ್, ಲಿಕ್ಕರ್ ಶಾಪ್, ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ
 • ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಇತರ ಕಾರ್ಯಕ್ರಮಗಳಿಗೆ ನಿಷೇಧ
 • ಲಾಡ್ಜ್ ಗಳಲ್ಲಿ ಈಗಾಗಲೇ ತಂಗಿರುವ ಅತಿಥಿಗಳಿಗೆ ಮಾತ್ರ ಸೇವೆ ಒದಗಿಸಲು ಅವಕಾಶ
 • ಅಗತ್ಯ ಸರಕುಗಳು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಮುಚ್ಚತಕ್ಕದ್ದು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img