Tuesday, May 18, 2021
Homeಸುದ್ದಿ ಜಾಲದಾವಣಗೆರೆಯಲ್ಲಿ ರೆಮ್ಡೆಸಿವಿರ್ ಅಕ್ರಮ ಮಾರಾಟ :ಇಬ್ಬರ ಬಂಧನ

ಇದೀಗ ಬಂದ ಸುದ್ದಿ

ದಾವಣಗೆರೆಯಲ್ಲಿ ರೆಮ್ಡೆಸಿವಿರ್ ಅಕ್ರಮ ಮಾರಾಟ :ಇಬ್ಬರ ಬಂಧನ

ದಾವಣಗೆರೆ, ಏ. 22; ದಾವಣಗೆರೆ ಜಿಲ್ಲಾ ಆಸ್ಪತ್ರೆ ಹಿಂಭಾಗದಲ್ಲೇ ಅಕ್ರಮವಾಗಿ ರೆಮ್ಡೆಸಿವಿರ್ ಲಸಿಕೆ ಮಾರಾಟ ಮಾಡುತ್ತಿದ್ದ ಜಿಲ್ಲಾಸ್ಪತ್ರೆಯ ಫಾರ್ಮಾಸಿಸ್ಟ್ ಸೇರಿ ಇಬ್ಬರನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾಸ್ಪತ್ರೆ ಹಿಂಭಾಗದಲ್ಲೇ ಆಟೋದಲ್ಲಿಟ್ಟುಕೊಂಡು ರೆಮ್ಡೆಸಿವಿರ್ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ. ಅಲ್ಲದೇ, ಬಂಧಿತರಿಂದ 9 ರೆಮ್ಡೆಸಿವಿರ್ ಲಸಿಕೆ ಬಾಟಲ್ ಹಾಗೂ 10 ಸಾವಿರ ರೂ. ನಗದು ಹಾಗೂ ಆಟೋವನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳನ್ನು ಫಾರ್ಮಾಸಿಸ್ಟ್ ಮಂಜುನಾಥ, ಆಟೋ ಚಾಲಕ ಗಣೇಶಪ್ಪ ಎಂದು ಗುರುತಿಸಲಾಗಿದೆ. ದುಡ್ಡಿನ ಆಸೆಗೆ ಮಂಜುನಾಥ, ಗಣೇಶಪ್ಪಗೆ ಅಕ್ರಮವಾಗಿ ಲಸಿಕೆ ಮಾರಾಟ ಮಾಡಲು ಹೇಳಿದ್ದು, ಬಂದ ಹಣದಲ್ಲಿ ಇಬ್ಬರು ಹಂಚಿಕೊಳ್ಳುವ ಯೋಜನೆ ಮಾಡಿದ್ದರು.

ದಾವಣಗೆರೆ ಜಿಲ್ಲಾಸ್ಪತ್ರೆಗೆ ಬಂದಿದ್ದ ಲಸಿಕೆಯಲ್ಲಿ 9 ಬಾಟಲ್ ಲಸಿಕೆಯನ್ನ ಕದ್ದು ಮಂಜುನಾಥ ಗಣೇಶಪ್ಪಗೆ ನೀಡಿ ಮಾರಾಟ ಮಾಡಲು ಹೇಳಿದ್ದ ಎನ್ನಲಾಗಿದೆ. ಅಲ್ಲದೇ, ಜಿಲ್ಲಾಸ್ಪತ್ರೆ ಹಿಂಭಾಗದಲ್ಲೇ ರಾಜಾರೋಷವಾಗಿ ಲಸಿಕೆ ಮಾರಾಟ ಮಾಡುತ್ತಿದ್ದ.

ಈ ಬಗ್ಗೆ ಔಷಧ ಪರಿವೀಕ್ಷಕಿ ಗೀತಾಗೆ ಖಚಿತ ಮಾಹಿತಿ ಬಂದಿತ್ತು. ಮಾಹಿತಿ ಹಿನ್ನಲೆಯಲ್ಲಿ ಪರಿವೀಕ್ಷಕಿ ಬಡಾವಣೆ ಠಾಣೆ ಪೊಲೀಸರೊಂದಿಗೆ ದಾಳಿ ನಡೆಸಿದ್ದು, ಈ ವೇಳೆ 9 ಬಾಟಲ್ ರೆಮ್ಡೆಸಿವಿರ್ ಲಸಿಕೆ ಹಾಗೂ 10 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರೆದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img