Monday, May 10, 2021
Homeಸುದ್ದಿ ಜಾಲಪ್ರಯೋಜನವಿಲ್ಲದ ಭಾಷಣ ಬಿಟ್ಟು,ಕೊರೊನಾಗೆ ಪರಿಹಾರ ನೀಡಿ: ರಾಹುಲ್ ಗಾಂಧಿ

ಇದೀಗ ಬಂದ ಸುದ್ದಿ

ಪ್ರಯೋಜನವಿಲ್ಲದ ಭಾಷಣ ಬಿಟ್ಟು,ಕೊರೊನಾಗೆ ಪರಿಹಾರ ನೀಡಿ: ರಾಹುಲ್ ಗಾಂಧಿ

ನವದೆಹಲಿ, ಏ.22: ಭಾಷಣಗಳಿಂದ ಏನೂ ಪ್ರಯೋಜನವಿಲ್ಲ, ಅದನ್ನು ಬದಿಗಿಟ್ಟು ಕೊರೊನಾ ಸೋಂಕಿಗೆ ಪರಿಹಾರ ನೀಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಅವರು, ಕೊರೊನಾ ಪರಿಸ್ಥಿತಿ ಕುರಿತು ಭಾಷಣಗಳನ್ನು ಮಾಡುವ ಬದಲು ದೇಶದ ಜನತೆಗೆ ಪರಿಹಾರವನ್ನು ನೀಡಲಿ ಎಂದಿದ್ದಾರೆ.

ದೇಶದ ಕೊರೊನಾ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಹೋಂ ಕ್ವಾರಂಟೈನ್ ನಲ್ಲಿದ್ದೇನೆ. ಬೇಸರ ತರಿಸುವ ಸುದ್ದಿಗಳು ಬರುತ್ತಲೇ ಇವೆ. ಭಾರತದಲ್ಲಿ ಇಂದು ಕೊರೊನಾದಿಂದ ಬಿಕ್ಕಟ್ಟು ಎದುರಾಗಿಲ್ಲ. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದಾಗಿ ಎದುರಾಗಿದೆ. ಕೇಂದ್ರ ಸರ್ಕಾರ ಟೊಳ್ಳು ಭಾಷಣ ಮಾಡುವ ಬದಲು ಕೊರೊನಾಗೆ ಪರಿಹಾರವನ್ನು ನೀಡಲಿ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ರಾಹುಲ್ ಗಾಂಧಿಯವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು , ಪ್ರಸ್ತುತ ಗೃಹಬಂಧನದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ 24 ಗಂಟೆಗಳಲ್ಲಿ 3,14,835 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, 2,104 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಒಂದು ದಿನದಲ್ಲಿ 1,78,841 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ.

ಗುರುವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 1,59,30,965 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೂ 1,34,54,880 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 1,84,657 ಸಾವಿನ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ 22,91,428 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img