Tuesday, May 11, 2021
Homeಕೋವಿಡ್-19ಕೊರೊನಾ ಹೊಸ ರೂಪಾಂತರ ತಳಿ ವೈರಸ್ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ ವಿಧಿ ವಿಜ್ಞಾನ ತಜ್ಞ...

ಇದೀಗ ಬಂದ ಸುದ್ದಿ

ಕೊರೊನಾ ಹೊಸ ರೂಪಾಂತರ ತಳಿ ವೈರಸ್ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ ವಿಧಿ ವಿಜ್ಞಾನ ತಜ್ಞ ಡಾ. ದಿನೇಶ್ ರಾವ್

ಕೊರೊನಾ ಸೋಂಕಿನಿಂದ ಮೃತ ಪಟ್ಟಿದ್ದಾರೆ ಎನ್ನಲಾದ ಮಹಿಳೆಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸುವ ಮೂಲಕ ಹೊಸ ತಳಿ ವೈರಸ್ ಇರುವ ಸಂಶಯದ ಬಗ್ಗೆ ಆತಂಕಕಾರಿ ಅಂಶವೊಂದನ್ನು ಖ್ಯಾತ ವಿಧಿ ವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಬಹಿರಂಗಪಡಿಸಿದ್ದಾರೆ. ಹೌದು ಆನೇಕಲ್ ತಾಲೂಕಿನ ಹೊಸೂರು ಮುಖ್ಯ ರಸ್ತೆಯಲ್ಲಿರುವ ಆಕ್ಸ್ಪರ್ಡ್ ಆಸ್ಪತ್ರೆಯಲ್ಲಿನ ವಿಧಿ ವಿಜ್ಞಾನ ತಜ್ಞ ಡಾ.ದಿನೇಶ್ ರಾವ್ ಈ ಹೊಸ ತಳಿ ವೈರಸ್ ಇರುವುದರ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ.

ಕಳೆದ ವರ್ಷ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನ ನಡೆಸಿದ್ದ ಡಾಕ್ಟರ್ ದಿನೇಶ್ ರಾವ್, ಇದೀಗ ಮತ್ತೊಂದು ಕೊರೊನಾ ಸೋಂಕಿನಿಂದ ಮೃತ ಪಟ್ಟಿದ್ದಾರೆ ಎನ್ನಲಾದ ಭಾರತೀಯ ಮೂಲದ 68 ವರ್ಷ ವಯಸ್ಸಿನ ಅಮೇರಿಕಾ ಪ್ರಜೆಯ ಮರಣೋತ್ತರ ಪರೀಕ್ಷೆ ಹಾಗೂ ಆರ್ಟಿಪಿಸಿಆರ್ ಪರೀಕ್ಷೆ ನಡೆಸಿದ್ದಾರೆ. ಮೊದಲಿಗೆ ಮಹಿಳೆಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ಧೃಡಪಟ್ಟಿದ್ದು ಮೂರು ದಿನಗಳ ಕಾಲ ಚಿಕಿತ್ಸೆ ಬಳಿಕ ಹೋಮ್ ಐಸೋಲೇಷನ್ಗೆ ಕಳುಹಿಸಿಕೊಡಲಾಗಿತ್ತು.

ಇದಾದ 12 ದಿನಗಳ ಬಳಿಕ ಮಹಿಳೆ ಉಸಿರಾಟದ ಸಮಸ್ಯೆಯಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾಗ ಸಿಟಿ ಸ್ಕ್ಯಾನ್ ಮಾಡಿದ ಸಂಧರ್ಭದಲ್ಲಿ ಶ್ವಾಸಕೋಶಕ್ಕೆ ಹಾನಿಯಾಗಿರುವುದು ಕಂಡು ಬಂದಿದ್ದು ಮತ್ತೊಮ್ಮೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿದಾಗ ಕೊರೊನಾ ನೆಗೆಟಿವ್ ರಿಪೋರ್ಟ್ ಬಂದಿತ್ತು, ಆದರೂ ಸಹ ಮಹಿಳೆ ಸಾವನ್ನಪ್ಪಿದ್ದರು. ಮೃತ ಮಹಿಳೆಯ ಕುಟುಂಬಸ್ಥರು ಸಾವಿಗೆ ಕಾರಣ ಏನೆಂಬುದನ್ನು ತಿಳಿದುಕೊಳ್ಳಲು ಆಕ್ಸ್‌ಫರ್ಡ್ ಕಾಲೇಜಿನ ವೈದ್ಯರಾದ ದಿನೇಶ್ ಅವರನ್ನು ಕೇಳಿಕೊಂಡಿದ್ದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದಾಗ ಮೃತ ಮಹಿಳೆಯ ಮೆದುಳು ಹಾಗೂ ಶ್ವಾಸಕೋಶಕ್ಕೆ ವೈರಸ್ ನಿಂದ ಸಂಪೂರ್ಣ ಹಾನಿಯಾಗಿದ್ದು ಕೋವಿಡ್ ಪರೀಕ್ಷೆಯಲ್ಲಿ ಮಾತ್ರ ಸೋಂಕು ಇಲ್ಲದೆ ಇರುವುದು ಧೃಡ ಪಟ್ಟಿತ್ತು. ಕೊರೊನಾ ವೈರಸ್ನ ರೂಪಾಂತರ ಅಥವ ಅನ್ಯ ವೈರಸ್ ಆಗಿರಬಹುದು ಎನ್ನುವ ಕುರಿತು ಸಂಶೋಧನೆ ನಡೆಯುವ ಆಗತ್ಯವಿದೆ ಎಂದು ಖ್ಯಾತ ವಿಧಿ ವಿಜ್ಞಾನ ತಜ್ಞ ಡಾಕ್ಟರ್ ದಿನೇಶ್ ರಾವ್ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img