Monday, May 10, 2021
Homeಕೋವಿಡ್-19ಬಾಲಿವುಡ್‍ ಚಿತ್ರರಂಗದ ಛಾಯಾಗ್ರಾಹಕ ಜಾನಿ ಲಾಲ್ ಕೋವಿಡ್‍ಗೆ ಬಲಿ

ಇದೀಗ ಬಂದ ಸುದ್ದಿ

ಬಾಲಿವುಡ್‍ ಚಿತ್ರರಂಗದ ಛಾಯಾಗ್ರಾಹಕ ಜಾನಿ ಲಾಲ್ ಕೋವಿಡ್‍ಗೆ ಬಲಿ

ಮುಂಬೈ: ದೇಶವನ್ನು ಎರಡನೇ ಬಾರಿ ಕಾಡುತ್ತಿರುವ ಕೋವಿಡ್ ಎರಡನೇ ಅಲೆ ಚಿತ್ರರಂಗದ ಮತ್ತೋರ್ವನನ್ನು ಬಲಿ ಪಡೆದಿದೆ. ಬಾಲಿವುಡ್‍ನ ಹಿರಿಯ ಛಾಯಾಗ್ರಾಹಕ ಜಾನಿ ಲಾಲ್ ಮಹಾಮಾರಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

‘ರೆಹನಾ ಹೈ ತೆರೆ ದಿಲ್ ಮೇ’ ಸಿನಿಮಾ ಖ್ಯಾತಿಯ ಜಾನಿ ಲಾಲ್ ಅವರಿಗೆ ಕಳೆದ ವಾರ ಕೋವಿಡ್ ತಗುಲಿತ್ತು. ಸಿನಿಮಾವೊಂದರ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದ ಅವರಿಗೆ ಪಾಸಿಟಿವ್ ಸೋಂಕು ದೃಢ ಪಟ್ಟಿತ್ತು. ಬುಧವಾರ ( ಏಪ್ರಿಲ್ 21) ಮುಂಬೈನ ಸ್ವನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ಜಾನಿ ಲಾಲ್ ಅವರ ನಿಧನಕ್ಕೆ ಬಾಲಿವುಡ್‍ನ ತಾರೆಯರು ಸಂತಾಪ ಸೂಚಿಸಿದ್ದಾರೆ.

ಜಾನಿ ಲಾಲ್ ಅವರು ‘ರೆಹನಾ ಹೈ ತೆರೆ ದಿಲ್ ಮೇ’, ‘ಮುಜ್ಹೆ ಕುಚ್ ಕೆಹ್ನಾ ಹೈ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದರು.

ಮಾಧವನ್ ಕಂಬಿನಿ :

ಹಿರಿಯ ಜೀವಿಯ ಸಾವಿಗೆ ಬಾಲಿವುಡ್ ನಟ ಮಾಧವನ್ ಸಂತಾಪ ಸೂಚಿಸಿದ್ದಾರೆ. ಮಾಧವನ್ ಅವರ ಬಿಟೌನ್ ಡೆಬ್ಯೂ ‘ರೆಹನಾ ಹೈ ತೆರೆ ದಿಲ್ ಮೇ’ ಚಿತ್ರಕ್ಕೆ ಜಾನಿ ಲಾಲ್ ಕ್ಯಾಮರಾ ವರ್ಕ್ ಮಾಡಿದ್ದರು. ಇವರ ನಿಧನಕ್ಕೆ ದುಃಖ ವ್ಯಕ್ತಪಡಿಸಿರುವ ಮಾಧವನ್, ಅದ್ಭುತ ವ್ಯಕ್ತಿಯನ್ನು ನಾವು ಕಳೆದುಕೊಂಡೆವು ಎಂದು ಟ್ವೀಟ್ ಮಾಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img