Sunday, May 9, 2021
Homeಅಂತರ್ ರಾಜ್ಯಕೊರೊನಾ ತುರ್ತು: ಉಚಿತವಾಗಿ 700 ಟನ್ ಆಕ್ಸಿಜನ್ ಪೂರೈಸಲು ಮುಂದಾದ ಉದ್ಯಮಿ ಅಂಬಾನಿ

ಇದೀಗ ಬಂದ ಸುದ್ದಿ

ಕೊರೊನಾ ತುರ್ತು: ಉಚಿತವಾಗಿ 700 ಟನ್ ಆಕ್ಸಿಜನ್ ಪೂರೈಸಲು ಮುಂದಾದ ಉದ್ಯಮಿ ಅಂಬಾನಿ

ಅಹ್ಮದಾಬಾದ್: ದೇಶದಲ್ಲಿ ಕರೊನಾ ರೋಗಿಗಳ ನಿರ್ವಹಣೆಯಲ್ಲಿ ಉಂಟಾಗಿರುವ ಆಕ್ಸಿಜನ್ ಕೊರತೆಯನ್ನು ಹೋಗಲಾಡಿಸಲು ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್​​ಐಎಲ್​) ಮುಂದಾಗಿದೆ.

ಈ ನಿಟ್ಟಿನಲ್ಲಿ ಆರ್​​ಐಎಲ್​ ತನ್ನ ಗುಜರಾತ್​ ಜಾಮ್ನಗರ್ ತೈಲ ಸಂಸ್ಕರಣಾಗಾರಗಳಲ್ಲಿ ದಿನಕ್ಕೆ 700 ಟನ್​ಗಳಷ್ಟು ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸಲು ನಿರ್ಧರಿಸಿದೆ. ಇದು COVID-19 ನಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ರಾಜ್ಯಗಳಿಗೆ ಉಚಿತವಾಗಿ ಸರಬರಾಜು ಮಾಡಲು ಎಂದು ಕಂಪೆನಿ ತಿಳಿಸಿದೆ.

ಜಾಮ್ನಗರ್ ಸಂಸ್ಕರಣಾಗಾರಗಳಲ್ಲಿ ಆರಂಭದಲ್ಲಿ 100 ಟನ್ ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸಲಾಗುತ್ತಿತ್ತು. ಕರೊನಾ ತುರ್ತು ಪರಿಸ್ಥಿತಿ ಆಗಿರುವುದರಿಂದ ಇದನ್ನು ತ್ವರಿತವಾಗಿ 700 ಟನ್‌ಗಳಿಗೆ ಹೆಚ್ಚಿಸಲಾಗಿದೆ. ಕೈಗಾರಿಕಾ ಉದ್ದೇಶಕ್ಕೆ ಮೀಸಲಿದ್ದ ಆಕ್ಸಿಜನ್ ಉತ್ಪಾದನೆಯನ್ನು ವೈದ್ಯಕೀಯ ಉದ್ದೇಶಕ್ಕೆ ಬಳಸಲು ಉತ್ಪಾದನೆ ಆರಂಭಿಸಲಾಗುತ್ತಿದೆ ಎಂದು ಆರ್​ಐಎಲ್ ಪ್ರಕಟಣೆ ಬುಧವಾರ ತಿಳಿಸಿದೆ.

ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಿಗೆ ಆರ್​ಐಎಲ್​​ ಜಾಮ್ನಗರ ಘಟಕದಿಂದ ಆಕ್ಸಿಜನ್ ಸರಬರಾಜು ಮಾಡಲಾಗುತ್ತಿದ್ದು, ಪ್ರತಿದಿನ 70,000 ಕ್ಕೂ ಹೆಚ್ಚು ಗಂಭೀರ ರೋಗಿಗಳಿಗೆ ಇದರಿಂದ ಪರಿಹಾರ ನೀಡಲಾಗುವುದು. ವೈದ್ಯಕೀಯ ದರ್ಜೆಯ ಆಮ್ಲಜನಕ ಉತ್ಪಾದನಾ ಸಾಮರ್ಥ್ಯವನ್ನು 1,000 ಟನ್‌ಗಳಿಗೆ ಹೆಚ್ಚಿಸಲು ಕಂಪನಿ ಯೋಜಿಸಿದೆ. ಇದು ಸಂಪೂರ್ಣ ಉಚಿತವಾಗಿದ್ದು, ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಅಡಿ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img