Monday, May 10, 2021
Homeಸುದ್ದಿ ಜಾಲದೆಹಲಿ ಸರ್ಕಾರದಿಂದ ಆಕ್ಸಿಜನ್ ಟ್ಯಾಂಕರ್ ನ್ನು ಲೂಟಿ: ಸಚಿವ ಅನಿಲ್ ವಿಜ್

ಇದೀಗ ಬಂದ ಸುದ್ದಿ

ದೆಹಲಿ ಸರ್ಕಾರದಿಂದ ಆಕ್ಸಿಜನ್ ಟ್ಯಾಂಕರ್ ನ್ನು ಲೂಟಿ: ಸಚಿವ ಅನಿಲ್ ವಿಜ್

ಚಂಡೀಗಢ: ದೆಹಲಿ ಸರ್ಕಾರ ಹರ್ಯಾಣಕ್ಕೆ ಸೇರಿದ ಆಕ್ಸಿಜನ್ ಟ್ಯಾಂಕರ್ ನ್ನು ಲೂಟಿ ಮಾಡಿದೆ ಎಂದು ಹರ್ಯಾಣದ ಗೃಹ, ಆರೋಗ್ಯ ಸಚಿವ ಅನಿಲ್ ವಿಜ್ ಆರೋಪಿಸಿದ್ದಾರೆ.

ಪಾಣಿಪತ್ ನಿಂದ ಫರೀದಾಬಾದ್ ನ ಆಸ್ಪತ್ರೆಗೆ ವೈದ್ಯಕೀಯ ಆಕ್ಸಿಜನ್ ನ್ನು ಕೊಂಡೊಯ್ಯುತ್ತಿರಬೇಕಾದರೆ, ದೆಹಲಿ ಸರ್ಕಾರ ಅದನ್ನು ನಿಲ್ಲಿಸಿ ಲೂಟಿ ಹೊಡೆದಿದೆ, ಇನ್ನು ಮುಂದೆ ನಮ್ಮ ಆಕ್ಸಿಕನ್ ಟ್ಯಾಂಕರ್ ಗಳು ಪೊಲೀಸ್ ಕಾವಲಿನಲ್ಲಿ ತೆರಳಲಿವೆ ಎಂದು ಅನಿಲ್ ವಿಜ್ ಹೇಳಿದ್ದಾರೆ. ಕೋವಿಡ್-19 ಹೆಚ್ಚಳದಿಂದ ಆಕ್ಸಿಜನ್ ಬೇಡಿಕೆಯೂ ಹೆಚ್ಚಿದೆ. ಹರ್ಯಾಣಕೆ ಬೇಕಾಗುವಷ್ಟನ್ನು ಉಳಿಸಿಕೊಂಡು ಆ ನಂತರ ಬೇರೆಯವರಿಗೆ ನೀಡುತ್ತೇವೆ ಎಂದು ವಿಜ್ ತಿಳಿಸಿದ್ದಾರೆ.

ಸರ್ಕಾರಗಳು ಲೂಟಿ ಮಾಡುವಂತಹ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಅವ್ಯವಸ್ಥೆ ಉಂಟಾಗಲಿದೆ, ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸುವುದಕ್ಕಾಗಿ ಪೊಲೀಸ್ ಭದ್ರತೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಗಳು ಸಂಚರಿಸಲಿವೆ, ಈ ಹಿಂದಿನ ಘಟನೆಯ ಬಗ್ಗೆ ದೆಹಲಿ ಸರ್ಕಾರದ ಅಧಿಕಾರಿಗಳಿಗೆ ಪತ್ರಬರೆಯಲಾಗುವುದು ಎಂದು ವಿಜ್ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img