Monday, May 10, 2021
Homeಸುದ್ದಿ ಜಾಲಅಮ್ಲಜನಕ ಸಿಗದೆ 22 ಕೊರೊನಾ ಸೋಂಕಿತರ ಸಾವು

ಇದೀಗ ಬಂದ ಸುದ್ದಿ

ಅಮ್ಲಜನಕ ಸಿಗದೆ 22 ಕೊರೊನಾ ಸೋಂಕಿತರ ಸಾವು

ನಾಸಿಕ್,ಏ.21-ಸಿವಿಕ್ ಆಸ್ಪತ್ರೆಯ ಅಮ್ಲಜನಕ ಸರಬರಾಜು ಘಟಕದಲ್ಲಿ ಅಕ್ಸಿಜನ್ ಸೋರಿಕೆಯಾಗಿ ಕೊರೊನಾ ಸೋಂಕಿತರಿಗೆ ಸಮರ್ಪಕ ಅಕ್ಸಿಜನ್ ಸಿಗದೆ 22 ರೋಗಿಗಳು ಸಾವನ್ನಪ್ಪಿರುವ ದುರಂತ ಘಟನೆ ನಾಸಿಕ್‍ನಲ್ಲಿ ಸಂಭವಿಸಿದೆ. ನಾಸಿಕ್‍ನಲ್ಲಿರುವ ಝಾಕೀರ್ ಹುಸೇನ್ ಮುನ್ಸಿಫಲ್ ಆಸ್ಪತ್ರೆಯ ಅಕ್ಸಿಜನ್ ಘಟಕದಲ್ಲಿ ಸೋರಿಕೆಯಾಗಿ ಸೋಂಕಿತರಿಗೆ ಸಮರ್ಪಕ ಅಮ್ಲಜನಕ ಸರಬರಾಜಾಗದ ಹಿನ್ನಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಜಿಲ್ಲಾಕಾರಿ ಸೂರಜ್ ಮಂದಾರೆ ತಿಳಿಸಿದ್ದಾರೆ.

ಅಸ್ಪತ್ರೆಯಲ್ಲಿ ನೂರಾರು ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ವೆಂಟಿಲೇಟರ್‍ನಲ್ಲಿದ್ದರೆ ಮತ್ತೆ ಕೆಲವರಿಗೆ ಅಕ್ಸಿಜನ್ ಹಾಕಲಾಗಿತ್ತು.
ಸೋಂಕಿತರಿಗೆ ಸಂಪರ್ಕ ಕಲ್ಪಿಸಲಾಗಿದ್ದ ಅಕ್ಸಿಜನ್ ಘಟಕದಲ್ಲಿ ಸೋರಿಕೆಯಾದ ಹಿನ್ನಲೆಯಲ್ಲಿ ರೋಗಿಗಳಿಗೆ ಸಮರ್ಪಕ ಅಮ್ಲಜನಕ ಸರಬರಾಜಾಗದೆ ಈ ಅವಘಡ ನಡೆದಿದೆ.

ವಿಷಯ ತಿಳಿಯುತ್ತಿದ್ದಂತೆ ಎಚ್ಚೆತುತಿಕೊಂಡ ಕಾಪೆರ್ರೆಷನ್ ಸಿಬ್ಬಂದಿಗಳು ಉಳಿದ ರೋಗಿಗಳನ್ನು ಸೂಕ್ತ ಸ್ಥಳಕ್ಕೆ ವರ್ಗಾಯಿಸಿದ್ದಾರೆ.
ಘಟನೆ ಸಂಭವಿಸಿದಾಗ 22 ಸೋಂಕಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು ನಂತರ ಮೃತರ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img