Tuesday, May 11, 2021
Homeಸುದ್ದಿ ಜಾಲಮುಷ್ಕರ ನಿರತ ಸಾರಿಗೆ ನೌಕರರಿಗೆ ಶಾಕ್ : ಒಂದೇ ದಿನ 1,937 ಸಿಬ್ಬಂದಿ...

ಇದೀಗ ಬಂದ ಸುದ್ದಿ

ಮುಷ್ಕರ ನಿರತ ಸಾರಿಗೆ ನೌಕರರಿಗೆ ಶಾಕ್ : ಒಂದೇ ದಿನ 1,937 ಸಿಬ್ಬಂದಿ ಅಮಾನತು

ಬೆಂಗಳೂರು : ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು ಮಂಗಳವಾರ ಒಂದೇ ದಿನ 1,937 ಸಿಬ್ಬಂದಿಯನ್ನು ಅಮಾನತು ಮಾಡಿದ್ದು, 199 ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಕೆಎಸ್ ಆರ್ ಟಿಸಿಯ 26, ಬಿಎಂಟಿಸಿಯ 1,905, ವಾಯುವ್ಯ ಕರ್ನಾಟಕ ರಸ್ತ ಸಾರಿಗೆ ಸಂಸ್ಥೆಯ ಇಬ್ಬರು ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಾಲ್ವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಮುಷ್ಕರ ಆರಂಭವಾದ ದಿನದಿಂದ ನಾಲ್ಕು ನಿಗಮಗಳಲ್ಲಿ ಸೇವೆಯಿಂದ ಅಮಾನತು ಮಾಡಲಾದ ನೌಕರರ ಸಂಖ್ಯೆ 2,941 ಕ್ಕೆ ಏರಿಕೆಯಾಗಿದೆ..

ಇನ್ನು ಬಿಎಂಟಿಸಿಯ 189, ಕೆಎಸ್‌ಆರ್ ಟಿಸಿಯ 8 ಮತ್ತು ಎನ್ ಇಕೆಆರ್ ಟಿಸಿಯ ಇಬ್ಬರು ಕಾಯಂ ನೌಕರರನ್ನು ಸೇವೆಯಿಂದ ವಜಾಗೊಳಿಸಿ ಮಂಗಳವಾರ ಆದೇಶ ಹೊರಡಿಸಲಾಗಿದೆ. ಈ ಮೂಲಕ ನಾಲ್ಕು ನಿಗಮಗಳಲ್ಲಿ ಈವರೆಗೆ ಒಟ್ಟು 1,174 ಕಾಯಂ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img