Sunday, May 9, 2021
Homeಸುದ್ದಿ ಜಾಲಮಾಸ್ಕ್​ ಧರಿಸದ ವ್ಯಕ್ತಿಗೆ 10 ಸಾವಿರ ರೂ. ದಂಡ..!

ಇದೀಗ ಬಂದ ಸುದ್ದಿ

ಮಾಸ್ಕ್​ ಧರಿಸದ ವ್ಯಕ್ತಿಗೆ 10 ಸಾವಿರ ರೂ. ದಂಡ..!

ಫೇಸ್​ ಮಾಸ್ಕ್ ಧರಿಸದ ಕಾರಣಕ್ಕೆ 10000 ರೂಪಾಯಿ ಸ್ವೀಕರಿಸಿದ ದೇಶದ ಮೊದಲ ವ್ಯಕ್ತಿ ಎಂಬ ಕುಖ್ಯಾತಿಗೆ ಡಿಯೋರಿಯಾ ಮೂಲದ ಅಮನ್​ ಪಾತ್ರರಾಗಿದ್ದಾರೆ.

ಫೇಸ್​ ಮಾಸ್ಕ್​ ಧರಿಸದ ಕಾರಣಕ್ಕೆ ಈ ವ್ಯಕ್ತಿ ಎರಡನೇ ಬಾರಿಗೆ ದಂಡ ಸ್ವೀಕರಿಸಿದ್ದಾರೆ. ಈ ಹಿಂದೆ ಬರಿಯಾರಪುರ ಪೊಲೀಸ್​ ಸರ್ಕಲ್​ನಲ್ಲಿ ಅವರಿಗೆ ಮಾಸ್ಕ್​ ಹಾಕದ್ದಕ್ಕೆ 1ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು.

ಇನ್ನು ಈ ವಿಚಾರವಾಗಿ ಮಾತನಾಡಿದ ಸ್ಟೇಷನ್​ ಹೌಸ್​ ಅಧಿಕಾರಿ ಟಿ.ಜೆ. ಸಿಂಗ್​, ಅಮರ್​ಜಿತ್​​ ಮಾಸ್ಕ್ ಇಲ್ಲದೇ ಸಾರ್ವಜನಿಕ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ವೇಳೆ ಪೊಲೀಸರು ಈತನನ್ನ ಹಿಡಿದಿದ್ದು 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಏಪ್ರಿಲ್​ 18ರಂದು ಅಮರ್​ಗೆ 1000 ರೂಪಾಯಿ ದಂಡ ವಿಧಿಸಲಾಗಿತ್ತು. ಅಲ್ಲದೇ ಮಾಸ್ಕ್​ನ್ನೂ ಪೊಲೀಸರು ನೀಡಿದ್ದರು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೊರೊನಾ ಕೇಸ್​ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಹೀಗಾಗಿ ಉತ್ತರ ಪ್ರದೇಶ ಸರ್ಕಾರ ಮೊದಲ ಬಾರಿಗೆ ಮಾಸ್ಕ್ ಧರಿಸದೇ ಸಿಕ್ಕಿ ಹಾಕಿಕೊಂಡರೆ 1000 ರೂಪಾಯಿ ಹಾಗೂ ಎರಡನೇ ಬಾರಿ 10 ಸಾವಿರ ರೂಪಾಯಿ ದಂಡ ನಿಗದಿ ಮಾಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img