Monday, May 10, 2021
Homeಸುದ್ದಿ ಜಾಲಭಾರತದಲ್ಲಿ 44 ಲಕ್ಷ ಡೋಸ್ ಲಸಿಕೆ ವ್ಯರ್ಥ

ಇದೀಗ ಬಂದ ಸುದ್ದಿ

ಭಾರತದಲ್ಲಿ 44 ಲಕ್ಷ ಡೋಸ್ ಲಸಿಕೆ ವ್ಯರ್ಥ

ಹೊಸ ದಿಲ್ಲಿ : ಲಸಿಕೆ ಕೊರತೆ ಕೂಗಿನ ನಡುವೆ “ಲಸಿಕೆ ವ್ಯರ್ಥ’ ತಲೆನೋವಾಗಿ ಪರಿಣಮಿಸಿದೆ. ಎಪ್ರಿಲ್‌ 11ರವರೆಗೆ ಭಾರತದಲ್ಲಿ 10 ಕೋಟಿ ಡೋಸ್‌ಗಳ ಪೈಕಿ ಬರೋಬ್ಬರಿ 44 ಲಕ್ಷ ಡೋಸ್‌ ಲಸಿಕೆ ವ್ಯರ್ಥಗೊಳಿಸಿರುವುದು ಆರ್‌ಟಿಐ ಅರ್ಜಿಗೆ ಕೇಂದ್ರ ನೀಡಿದ ಉತ್ತರದಿಂದ ತಿಳಿದುಬಂದಿದೆ.

ಈ ಪೈಕಿ ತಮಿಳುನಾಡು ಮುಂಚೂಣಿಯಲ್ಲಿದ್ದು, ಅಲ್ಲಿ ಶೇ.12ರಷ್ಟು ಲಸಿಕೆ ವ್ಯರ್ಥವಾಗಿದೆ. ಬಳಿಕ ಹರಿಯಾಣ (ಶೇ.9.74), ಪಂಜಾಬ್‌ (ಶೇ.8.2), ಮಣಿಪುರ (ಶೇ.7.8), ತೆಲಂಗಾಣ (ಶೇ.7.55) ನಂತರದ ಸ್ಥಾನದಲ್ಲಿವೆ.

ಇಲ್ಲೆಲ್ಲ ಕಡಿಮೆ ವ್ಯರ್ಥ: ಲಸಿಕೆಯನ್ನು ಕನಿಷ್ಠ ಪ್ರಮಾಣದಲ್ಲಿ ವ್ಯರ್ಥಗೊಳಿಸಿದ ರಾಜ್ಯಗಳ ಪೈಕಿ ಕೇರಳ, ಪ. ಬಂಗಾಲ, ಹಿಮಾಚಲ ಪ್ರದೇಶ, ಮಿಝೋರಾಂ, ಗೋವಾ, ದಾಮನ್‌ ಮತ್ತು ದಿಯು, ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷ ದ್ವೀಪಗಳು ಮುಂಚೂಣಿಯಲ್ಲಿವೆ.

ತಳಿ ಹಾವಳಿ: ಕೊರೊನಾದ ಭಾರತದ ತಳಿ ಇಸ್ರೇಲ್‌ ಪ್ರವೇಶಿಸಿದ್ದು, ಪ್ರತೀ 7 ಸೋಂಕಿತರಲ್ಲಿ ಒಬ್ಟಾತನಲ್ಲಿ ಭಾರತೀಯ ರೂಪಾಂತರಿ ದೃಢಪಡುತ್ತಿದೆ ಎಂದು ಆರೋಗ್ಯ ಇಲಾಖೆ ಆತಂಕವ್ಯಕ್ತಪಡಿಸಿದೆ. ಅಲ್ಲದೆ ಇದಕ್ಕೆ ಫೈಜರ್‌/ ಬಯಾನ್‌ಟೆಕ್‌ ಲಸಿಕೆಗಳು ಹೆಚ್ಚು ಪರಿಣಾಮಕಾರಿ ಅಂತಲೂ ಅಭಿಪ್ರಾಯಪಟ್ಟಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img