Tuesday, May 18, 2021
Homeಜಿಲ್ಲೆಕೊಪ್ಪಳಹೆರಿಗೆ ಮಾಡಿಸಲು ಬಂದ ಆಶಾ ಕಾರ್ಯಕರ್ತೆ ಮೇಲೆ 59 ರ ಹರೆಯದ ವೃದ್ಧ ಅತ್ಯಾಚಾರಕ್ಕೆ ಯತ್ನ

ಇದೀಗ ಬಂದ ಸುದ್ದಿ

ಹೆರಿಗೆ ಮಾಡಿಸಲು ಬಂದ ಆಶಾ ಕಾರ್ಯಕರ್ತೆ ಮೇಲೆ 59 ರ ಹರೆಯದ ವೃದ್ಧ ಅತ್ಯಾಚಾರಕ್ಕೆ ಯತ್ನ

ಕೊಪ್ಪಳ : ಎಪ್ರಿಲ್ 18 ನೇ ತಾರೀಖಿನಂದು ತಡರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ವ್ಯಕ್ತಿಯನ್ನು ನಗರ ಪೋಲಿಸರು ಬಂಧಿಸಿದ್ದಾರೆ.

ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದ ರೇಶ್ಮಾ ಗಂಡ ಮಹೇಶ್ ಎಂಬ ಮಹಿಳೆಗೆ ಹೆರಿಗೆ ಮಾಡಿಸಲು ಬಸರಿಹಾಳ ಗ್ರಾಮದ ಆಶಾ ಕಾರ್ಯಕರ್ತೆ ಗಂಗಾವತಿ ನಗರದ ಉಪವಿಭಾಗ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗದ ಕಾರಣ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯನ್ನು ದಾಖಲಿಸಿ ರಾತ್ರಿ ಆದ ಕಾರಣ ಆಶಾ ಕಾರ್ಯಕರ್ತೆ ಅದೇ ಆಸ್ಪತ್ರೆಯಲ್ಲಿ ಮಲಗಿರುತ್ತಾಳೆ.

ಇದೇ ವೇಳೆ ಗರ್ಭಿಣಿ ಮಹಿಳೆಯ ತಂದೆ ಬಾಲಪ್ಪ ತಂದೆ ಮುದುಕಪ್ಪ (59) ತಡ ರಾತ್ರಿ ಆಶಾ ಕಾರ್ಯಕರ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ನಂತರ ಜೀವ ಬೆದರಿಕೆ ಹಾಕಿದ್ದಾನೆ.

ತನ್ನ ಮಗಳ ಹೆರಿಗೆ ಮಾಡಿಸಲು ಬಂದ‌ ಆಶಾ ಕಾರ್ಯಕರ್ತೆಗೆ ಕರುಣೆ ತೋರದೆ ಬಲಾತ್ಕಾರಕ್ಕೆ ಯತ್ನಿಸಿರುವುದು ನಾಚಿಕೆಗೆಡಿನ ಸಂಗತಿ, ಹಗಲು ರಾತ್ರಿ ಎನ್ನದೆ ಗರ್ಭಿಣಿಯರ ಆರೈಕೆ ಮಾಡುತ್ತಾ ಹೆರಿಗೆ ಮಾಡಿಸುವವರೆಗೂ ತಮ್ಮ ಪರಿವಾರವನ್ನು ಬಿಟ್ಟು ಸಮಾಜದ ಕೆಲಸಕ್ಕೆ ಮುಂದೆ ಬಂದ ಮಹಿಳೆಯರನ್ನು ಈ ರೀತಿಯಾಗಿ ನೋಡುವುದು ಸಮಾಜಕ್ಕೆ ಕಪ್ಪು ಚುಕ್ಕೆ,

ಪ್ರಕರಣ ದಾಖಲಿಸುತಿದ್ದಂತೆ ನಗರ ಠಾಣೆಯ ಪಿ,ಐ, ವೆಂಕಟಸ್ವಾಮಿ ನೇತೃತ್ವದ ತಂಡ ಬಾಲಪ್ಪನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

 

ಮಂಜು ಬಿ ತೋಟಗೇರ್

ವಿ ನ್ಯೂಸ್ 24 ಕನ್ನಡ

ಕೊಪ್ಪಳ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img