Tuesday, May 18, 2021
Homeಸುದ್ದಿ ಜಾಲಆನೇಕಲ್ ತಾಲೂಕಿನ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲೆಂಡರ್ ಕೊರತೆ : ಕೊರೊನಾ ಸೋಂಕಿತರ ಪರದಾಟ

ಇದೀಗ ಬಂದ ಸುದ್ದಿ

ಆನೇಕಲ್ ತಾಲೂಕಿನ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲೆಂಡರ್ ಕೊರತೆ : ಕೊರೊನಾ ಸೋಂಕಿತರ ಪರದಾಟ

ಆನೇಕಲ್: ರಾಜ್ಯದಲ್ಲಿ ಎರಡನೇ ಅಲೆ ಕೊರೊನಾ ಮಹಾಮಾರಿಗೆ ತತ್ತರಿಸಿ ಹೋಗಿರುವ ಇಂತಹ ಸಂಧರ್ಭದಲ್ಲಿ ಇದೀಗ ಮತ್ತೊಂದು ಗಂಡಾಂತರ ಎದುರಾಗಿದೆ. ಬೆಂಗಳೂರಿನಲ್ಲಿ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಸಿಲೆಂಡರ್ ಕೊರತೆಯಿಂದಾಗಿ ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ವೈದ್ಯರು ಆಕ್ಸಿಜನ್ ಗಾಗಿ ಬೇಡುವಂತ ಪರಿಸ್ಥಿತಿಯಾಗಿದೆ.

ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿರುವ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಹಾಗೂ ರೋಗಿಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ಮೂರು ದಿನಗಳಿಂದ ಆನೇಕಲ್ ತಾಲೂಕಿಗೆ ಸರಬರಾಜು ಆಗುತ್ತಿದ್ದ ಆಕ್ಸಿಜನ್ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

ತಾಲ್ಲೂಕಿನಲ್ಲಿರುವ 25 ಖಾಸಗಿ ಆಸ್ಪತ್ರೆಗೆ ಸರಬರಾಜು ಆಗಬೇಕಿದ್ದ ಆಕ್ಸಿಜನ್ ಪ್ರಮಾಣದಲ್ಲಿ ಶೇಕಡ 25% ರಷ್ಟು ಮಾತ್ರ ಸರಬರಾಜು ಆಗಿರುವುದರಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಈಗಾಗಲೇ ಸೋಂಕಿತರು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವಂತಹ ಅಸಹಾಯಕತೆ ನಮ್ಮಲ್ಲಿ ಕಾಡುತ್ತಿದೆ ಎಂದು ಆತೇಯ ಆಸ್ಪತ್ರೆಯ ಮುಖ್ಯಸ್ಥರಾದ ವೈದ್ಯ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಒಂದು ಜಂಬೋ ಸಿಲಿಂಡರ್ ಹಾಗೂ ಡೋರಾ ಸಿಲಿಂಡರ್ ಸರಬರಾಜಿನಲ್ಲಿ 100 ಸಿಲಿಂಡರ್ ಅವಶ್ಯಕತೆ ಇರುವ ಜಾಗಕ್ಕೆ ಕೇವಲ 25 ಸಿಲೆಂಡರ್ ಸರಬರಾಜು ಮಾಡುತ್ತಿದ್ದು ಆರೋಗ್ಯ ಸಚಿವ ಸುಧಾಕರ್ ಅವರಿಗೆ ನೇರವಾಗಿ ಮನವಿ ಮಾಡಿದರು ಕೂಡ ಆಕ್ಸಿಜನ್ ಸಿಲೆಂಡರ್ ಸರಬರಾಜು ಆಗುತ್ತಿಲ್ಲ. ತಾಲ್ಲೂಕಿನಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಆಕ್ಸಿಜನ್ ಇಲ್ಲದೆ ಪರದಾಟ ನಡೆಸುತ್ತಿರುವುದನ್ನು ತಪ್ಪಿಸಲೆಂದು ಆನೇಕಲ್ ತಾಲ್ಲೂಕಿನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಚಂದಾಪುರದ ಆತ್ರೇಯ ಆಸ್ಪತ್ರೆಯಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನು ನಡೆಸಿದರು, ಆನೇಕಲ್ಲಿನ ಅತ್ತಿಬೆಲೆಯಲ್ಲಿರುವ ಏಜೆನ್ಸಿಗೆ ಬಂದಿರುವ ನೂರು ಸಿಲೆಂಡರ್ ಯಾವ ಆಸ್ಪತ್ರೆಗೆ ಕೂಡ ಸರಬರಾಜು ಮಾಡಲು ಸಾಧ್ಯವಿಲ್ಲ.

ಈಗಾಗಲೇ ಆಸ್ಪತ್ರೆಗಳಲ್ಲಿ ಸೋಂಕಿತರು ಆಕ್ಸಿಜನ್ ಇಲ್ಲದೆ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ, ನಾವು ಸರ್ಕಾರ ಹೇಳಿದಂತೆ ಬೆಡ್ ಗಳನ್ನು ನೀಡಲು ಸಿದ್ಧರಾಗಿದ್ದೇವೆ. ಆದರೆ ಸರಿಯಾದ ರೀತಿಯಲ್ಲಿ ಆಕ್ಸಿಜನ್ ಸರಬರಾಜು ಆಗದ ಹಿನ್ನೆಲೆಯಲ್ಲಿ ನಮ್ಮ ಕಣ್ಣೆದುರು ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಆಕ್ಸಿಜನ್ ಸಿಲೆಂಡರ್ ಗಳನ್ನು ಸರಬರಾಜು ಮಾಡಬೇಕೆಂದು ವೈದ್ಯ ಡಾ.ವಿಜಯ ರಾಘವ ರೆಡ್ಡಿ ಒತ್ತಾಯಿಸಿದರು.

ಅಂಬರೀಶ್

ವಿ ನ್ಯೂಸ್ 24 ಕನ್ನಡ

ಆನೇಕಲ್.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img