Monday, May 10, 2021
Homeಅಂತರ್ ರಾಷ್ಟ್ರೀಯಅಡೋಬ್ ಸಹ ಸಂಸ್ಥಾಪಕ ಚಾರ್ಲ್ಸ್ ಚಕ್‌ ಗೆಶ್ಕೆ ನಿಧನ

ಇದೀಗ ಬಂದ ಸುದ್ದಿ

ಅಡೋಬ್ ಸಹ ಸಂಸ್ಥಾಪಕ ಚಾರ್ಲ್ಸ್ ಚಕ್‌ ಗೆಶ್ಕೆ ನಿಧನ

ವಿಶ್ವದ ಪ್ರಮುಖ ಸಾಫ್ಟ್‌ವೇರ್ ಕಂಪನಿಗಳಲ್ಲಿ ಒಂದಾದ ಅಡೋಬ್‌ನ ಸಹ ಸಂಸ್ಥಾಪಕರಾದ ಹಾಗೂ ಪಿಡಿಎಫ್‌ ತಂತ್ರಜ್ಞಾನದ ಡೆವಲಪರ್ ಚಾರ್ಲ್ಸ್‌ ಚಕ್‌ ಗೆಶ್ಕೆ (81) ಇಹಲೋಹ ತ್ಯಜಿಸಿದ್ದಾರೆ.

ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ನೆಲೆಸಿದ್ದ ಅವರು, ಸಾಫ್ಟ್‌ವೇರ್‌ ಜಗತ್ತಿನಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಇವರ ಸಾಧನೆ ಗುರುತಿಸಿ 2009ರಲ್ಲಿ ನ್ಯಾಷನಲ್‌ ಮೆಡಲ್‌ ಆಫ್‌ ಟೆಕ್ನಾಲಜಿ ಪ್ರಶಸ್ತಿಯನ್ನು ಆಗಿನ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ನೀಡಿದ್ದರು.

ಚಾರ್ಲ್ಸ್‌ ಚುಕ್‌ಗೆಶ್ಕೆ 1982ರಲ್ಲಿ ವರ್ನಾಕ್ ಅಡೋಬ್ ಸಾಫ್ಟ್‌ವೇರ್ ಕಂಪನಿಯನ್ನು ಸ್ಥಾಪಿಸಿದರು. 1990ರ ದಶಕದಲ್ಲಿ ಪಿಡಿಎಫ್ ಫಾರ್ಮೆಟ್ ಅಭಿವೃದ್ಧಿಪಡಿಸುವ ಮೂಲಕ ಸಾಕಷ್ಟು ತಂತ್ರಜ್ಞಾನ ಅಭಿವೃದ್ಧಿಗೆ ಕಾರಣರಾದರು.

ಬಹಳ ಮಹತ್ವದ ಸಾಫ್ಟ್‌ವೇರ್‌ ಕಂಪನಿಯಾದ ಅಡೋಬ್‌ ಅನ್ನು ಚಾರ್ಲ್ಸ್ ಮತ್ತು ಜಾನ್‌ ವಾರ್ನಕ್‌ ಅಭಿವೃದ್ಧಿ ಪಡಿಸಿದ್ದರು. ಅಡೋಬ್‌ ಪೋಸ್ಟ್‌ಸ್ಕ್ರಿಪ್ಟ್‌ ಅನ್ನುವುದು ಮೊದಲ ಉತ್ಪನ್ನವಾಗಿದೆ. ಚಾರ್ಲ್ಸ್ ಅವರ ಅವಿರತ ಶ್ರಮದ ಫಲವಾಗಿಯೇ ಪಿಡಿಎಫ್‌, ಅಕ್ರೊಬಾಟ್‌, ಇಲ್ಲಸ್ಪ್ರೇಟರ್‌, ಪ್ರೀಮಿಯರ್‌ ಪ್ರೊ ಮತ್ತು ಫೋಟೊಶಾಪ್‌ನಂಥ ಬಹುಮುಖ್ಯ ಸಾಫ್ಟ್‌ವೇರ್‌ಗಳು ಹೊರಬಂದವು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img