Tuesday, May 18, 2021
Homeಬೆಂಗಳೂರುಲಾಕ್ ಡೌನ್ ಭಯದಿಂದ ಬೆಂಗಳೂರು ತೊರೆಯುತ್ತಿರುವ ವಲಸೆ ಕಾರ್ಮಿಕರು

ಇದೀಗ ಬಂದ ಸುದ್ದಿ

ಲಾಕ್ ಡೌನ್ ಭಯದಿಂದ ಬೆಂಗಳೂರು ತೊರೆಯುತ್ತಿರುವ ವಲಸೆ ಕಾರ್ಮಿಕರು

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಬೆಂಗಳೂರು ನಗರ ಬಿಟ್ಟು ತಮ್ಮ ಸ್ವಂತ ಊರುಗಳಿಗೆ ಹೊರಡಲು ಪ್ರಾರಂಭಿಸಿದ್ದಾರೆ.

ಕೊರೊನಾ ಮಹಾಮಾರಿ ಬೆಂಗಳೂರಿಗೆ ಹೊಟ್ಟೆಪಾಡಿಗಾಗಿ ಬಂದಿದ್ದ ವಲಸೆ ಕಾರ್ಮಿರನ್ನು ಮತ್ತೆ ಅತಂತ್ರವಾಗಿಸಿದೆ. ಲಾಕ್ ಡೌನ್, ಕಠಿಣ ನಿಯಮ ಜಾರಿ ಭೀತಿಯಿಂದ ಬೇರೆ ರಾಜ್ಯದಿಂದ ಬಂದಿದ್ದ ಕಾರ್ಮಿಕರು ಮತ್ತೆ ಲಗೇಜ್ ಸಮೇತ ಬೆಂಗಳೂರು ತೊರೆಯುತ್ತಿದ್ದಾರೆ.

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ಬಿಹಾರ ಮೂಲದ ಕೂಲಿ ಕಾರ್ಮಿಕರು ತಮ್ಮ ಊರು ಸೇರಲು ಸಜ್ಜಾಗಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಕುಟುಂಬ ಸಮೇತರಾಗಿ ತಮ್ಮ ಊರುಗಳಿಗೆ ತೆರಳಲು ಸಿದ್ದತೆ ನಡೆಸಿದ್ದಾರೆ.

ಕಳೆದ ವರ್ಷ ಲಾಕ್ ಡೌನ್ ಮಾಡಿದ್ದ ವೇಳೆ ಸಾವಿರಾರು ಕಾರ್ಮಿಕರು ಉದ್ಯೋಗವಿಲ್ಲದೆ ಬೆಂಗಳೂರಿನಲ್ಲಿ ಪರದಾಡಿದ್ದರು. ಅಲ್ಲದೆ, ತಮ್ಮ ಊರುಗಳನ್ನು ತಲುಪಲು ತುಂಬಾ ಕಷ್ಟಪಟ್ಟಿದ್ದರು. ಹೀಗಾಗಿ ಈ ಬಾರಿಯೂ ಲಾಕ್ ಡೌನ್ ಭೀತಿ, ಕಠಿಣ ನಿಯಮ ಜಾರಿಯ ಭೀತಿ ಎದುರಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕಾರ್ಮಿಕರೇ ತಮ್ಮ ರಾಜ್ಯಗಳತ್ತ ಮುಖಮಾಡುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img