Monday, May 10, 2021
Homeಜಿಲ್ಲೆಕೊಪ್ಪಳಕುಷ್ಟಗಿ ಪುರಸಭೆಯಿಂದ ಮಾಸ್ಕ್ ಹಾಕದವರಿಗೆ ದಂಡ

ಇದೀಗ ಬಂದ ಸುದ್ದಿ

ಕುಷ್ಟಗಿ ಪುರಸಭೆಯಿಂದ ಮಾಸ್ಕ್ ಹಾಕದವರಿಗೆ ದಂಡ

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪುರಸಭೆಯಿಂದ ಕೋವಿಡ್ 19 ಜಾಗೃತಿ ಅಂಗವಾಗಿ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ ಹಾಕಲಾಯಿತು.

ಕುಷ್ಟಗಿ ಪುರಸಭೆಯ ಮುಖ್ಯ ಅಧಿಕಾರಿ ಉಮೇಶ್ ಹಿರೇಮಠ, ಕುಷ್ಟಗಿ ಸರ್ಕಲ್ ಇನ್ಸ್ಪೆಕ್ಟರ್ ನಿಂಗಪ್ಪ ಎನ್ ಆರ್, ತಹಸೀಲ್ದಾರ್ ಸಿದ್ದೇಶ್ ಮತ್ತು ಪಿ ಎಸ್ ಐ ತಿಪ್ಪಣ್ಣ ನಾಯ್ಕ್ ಅವರ ತಂಡ ಕುಷ್ಟಗಿ ಪಟ್ಟಣದಲ್ಲಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರದ ಮೂಲಕ ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವಂತೆ ಇತರರಿಗೆ ಸಂದೇಶ ನೀಡಿದರು.

ಕುಷ್ಟಗಿ ಪುರಸಭೆ ಹಾಗೂ ತಾಲೂಕು ಆಡಳಿತ ತಾಲೂಕಿನಲ್ಲಿ ಕೊರೋನ ಸೋಂಕು ತಡೆಗಟ್ಟಲು ಮುಂದಾಗಿದ್ದು ಸಾರ್ವಜನಿಕರು ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸಬೇಕು, ಅಗತ್ಯವಿದ್ದರೆ ಮಾತ್ರ ಹೊರಗಡೆ ತಿರುಗಾಡಬೇಕು, ಮಾಸ್ಕ್ ಖಡ್ಡಾಯವಾಗಿ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿ ಸಾನಿಟೈಸ್ ಬಳಸಿ iಹಾಗೂ ಸ್ವಚ್ಛತೆ ಕಾಪಾಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.

ಈರಯ್ಯ ಕುರ್ತಕೋಟಿ
ವಿ ನ್ಯೂಸ್ 24

ಕೊಪ್ಪಳ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img