Thursday, July 29, 2021
HomeExclusiveರೆಮ್ಡಿಸಿವರ್ ಲಸಿಕೆ ದುರುಪಯೋಗ : ಎಂವಿಜೆ ಫಾರ್ಮಸಿ ವಿರುದ್ಧಕೇಸು ದಾಖಲು

ಇದೀಗ ಬಂದ ಸುದ್ದಿ

ರೆಮ್ಡಿಸಿವರ್ ಲಸಿಕೆ ದುರುಪಯೋಗ : ಎಂವಿಜೆ ಫಾರ್ಮಸಿ ವಿರುದ್ಧಕೇಸು ದಾಖಲು

ಹೊಸಕೋಟೆ:  ರಾಜ್ಯದಲ್ಲಿ ಕಿಲ್ಲರ್ ಕರೋನ‌ ಎರಡನೇ ಅಲೆ ಆರ್ಭಟ ಮಿತಿಮೀರುತ್ತಿದೆ.ಅದರಲ್ಲೂ‌ ಬೆಂಗಳೂರಿನಲ್ಲಿ ಕಳೆದ ಹತ್ತು ದಿನಗಳಲ್ಲಿ ದಿನದಿಂದ ದಿನಕ್ಕೆ ದಾಖಲೆ ಮಟ್ಟದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗಿತ್ತಿದೆ.

ಈ ನಡುವೆ ಕರೋನ ಲಸಿಕೆಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಾಗಿದ್ದು,ಲಸಿಕೆಗಳ ಕೊರತೆ ಉಂಟಾಗಿದೆ.ಕೋವಿಡ್ ಲಸಿಕೆಗಳನ್ನ ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಿದ್ದು‌ ಬೆಳಕಿಗೆ ಬಂದಿದೆ.

ಅದೆ ರೀತಿಯಲ್ಲಿ ಇಂದು ಹೊಸಕೋಟೆ ತಾಲ್ಲೂಕಿನಲ್ಲಿ ಕರೋನ ಸೋಂಕಿತರ ಸಂಖ್ಯೆ ಹೆಚ್ಚಾದರಿಂದ ಬೆಂಗಳೂರು ಗ್ರಾಮಾಂತರ ಡಿಸಿ ಶ್ರೀನಿವಾಸ್ ರವರು ಮತ್ತು ತಾಶೀಲ್ದಾರ್ ಗೀತಾ ಅವರೊಂದಿಗೆ ಎಂವಿಜೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಪರಿಶೀಲನೆ ಮಾಡಲು ಬಂದಿದ್ದ ಸಮಯದಲ್ಲಿ ಆಸ್ಪತ್ರೆಯ ನಿರ್ವಹಣಾಧಿಕಾರಿ ರೆಮಿಡಿಸ್ವಿಯರ್ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಜಿಲ್ಲಾಧಿಕಾರಿಯವರು ರೆಮಿಡಿಸ್ವಿಯರ್ ಸಮಸ್ಯೆ ನಮ್ಮ ಜಿಲ್ಲೆಯಲ್ಲಿ ಇಲ್ಲಾ,ಎಲ್ಲಾ ಆಸ್ಪತ್ರೆಗಳಿಗೆ ಸಮರ್ಪಕವಾಗಿ ರಾಜ್ಯ ಸರ್ಕಾರ ನೀಡುತ್ತಿದೆ  ಎಂದು ಹೇಳಿದರು.

ನಂತರ ಎಂ.ವಿ.ಜೆ ಆಸ್ಪತ್ರೆಯ ಹೊರಗುತ್ತಿಗೆ ಫಾರ್ಮಸಿ ಮೇಲೆ ದಿಡೀರನೆ ದಾಳಿಮಾಡಿದಾಗ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ರೆಮಿಡಿಸ್ವಿಯರ್ ‌ಇಂಜೆಕ್ಷನ್ ಮಾರಾಟ ಮಾಡಿದ್ದು ಬೆಳಕಿಗೆ.

ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಎಂಬ ವ್ಯಕ್ತಿ ಎಂ.ವಿ.ಜೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಕೋವಿಡ್ ಸೋಂಕಿತರ ಹೆಸರಲ್ಲಿ ರೆಮ್ಡಿಸಿವರ್‌ಅನ್ನು ತರಿಸಿಕೊಂಡು, ಇತರೆ ಆಸ್ಪತ್ರೆಗಳಿಗೆ ಹಾಗೂ ವೈದ್ಯರು ಸೂಚನೆ ಇರುವ ಚೀಟಿಯುಳ್ಳವರಿಗೆ ಮಾರಾಟ ಮಾಡುತ್ತಿರುವುದು ದಾಳಿ ವೇಳೆ ಕಂಡುಬಂದಿದೆ.

ಎಂ ವಿ ಜೆ ಆಸ್ಪತ್ರೆಯ ವೈದ್ಯಧಿಕಾರಿಗಳು ರೆಮ್ಡಿಸಿವರ್‌ ಲಸಿಕೆ ಬಗ್ಗೆ ವಿಚಾರಣೆ ಮಾಡಿದ್ದಾಗ ಯಾವುದೆ ಸರ್ಕಾರದ ವತಿಯಿಂದ ಬಂದಿಲ್ಲ ಎಂದು ಸುಳ್ಳು ಹೇಳಿ ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ‌.ಇದು ಆಸ್ಪತ್ರೆ ಆಡಳಿತ ಮಂಡಳಿಯ ಕಣ್ಣು ತಪ್ಪಿಸಿ ಆಸ್ಪತ್ರೆಗೆ ದಾಖಲಾದ ರೋಗಿಗಳ ಹೆಸರಿನ ಮೇಲೆ ಸರ್ಕಾರಕ್ಕೆ ಲೆಕ್ಕ ತೋರಿಸಿ ಖಾಸಗಿ ಆಸ್ಪತ್ರೆ ರೋಗಿಗಳಿಗೆ ಹೆ‍‍ಚ್ಚಿನ ಹಣ ಪಡೆದು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆ, ಆರೋಪಿಯ ವಿರುದ್ಧ ಹೊಸಕೋಟೆ ಪಟ್ಟಣದ ಪೊಲೀಸ್  ಠಾಣೆಯಲ್ಲಿ ಪ್ರಕರಣ ಸಂಖ್ಯೆ 153/2021 ಅನ್ನು ದಾಖಲಿಸಲಾಗಿದೆ. ಇದು ಕರ್ನಾಟಕದಲ್ಲೇ ಮೊದಲ‌‌ ಬಾರಿಗೆ  ರೆಮಿಡಿಸ್ವಿಯರ್ ಲಸಿಕೆಯನ್ನು ಖಾಸಗಿ ಆಸ್ಪತ್ರೆಯ ರೋಗಿಗಳಿಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿ‌ ದಾಳಿ ವೇಳೆ ಸಿಕ್ಕಿ ಬಿದ್ದ ಘಟನೆಯಾಗಿದೆ.

ರಾಮು

ವಿ ನ್ಯೂಸ್ 24 ಕನ್ನಡ

ಹೊಸಕೋಟೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img