Monday, May 10, 2021
Homeಸುದ್ದಿ ಜಾಲದೆಹಲಿ : ಪ್ರತಿ ಗಂಟೆಗೆ 10 ಜನರು ಕೋವಿಡ್-19ಗೆ ಬಲಿ!

ಇದೀಗ ಬಂದ ಸುದ್ದಿ

ದೆಹಲಿ : ಪ್ರತಿ ಗಂಟೆಗೆ 10 ಜನರು ಕೋವಿಡ್-19ಗೆ ಬಲಿ!

 ನವದೆಹಲಿ, ಏ. 20: ದೆಹಲಿಯಲ್ಲಿ ಕೊರೊನಾವೈರಸ್‌ನಿಂದಾಗಿ ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿರುವ ನಡುವೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಒಂದು ವಾರ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ.

ದೆಹಲಿಯಲ್ಲಿ ಸೋಮವಾರ ಕೊರೊನಾವೈರಸ್‌ಗೆ 240 ಜನರು ಸಾವನ್ನಪ್ಪಿರುವ ವರದಿ ದಾಖಲಾಗಿದ್ದು, ಇದು ಒಂದು ವರ್ಷದ ಹಿಂದೆ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಅತಿ ಹೆಚ್ಚಾಗಿದೆ. ಪ್ರತಿ ಗಂಟೆಗೆ 10 ಜನರು ಕೋವಿಡ್-19ಗೆ ಸಾವನ್ನಪ್ಪುತ್ತಿರುವ ಅಂಶ ಬೆಳಕಿಗೆ ಬಂದಿದೆ.

ಶೇ.26.12 ರಷ್ಟು ಸಕಾರಾತ್ಮಕತೆಯೊಂದಿಗೆ 23,686 ಹೊಸ ಪ್ರಕರಣಗಳು ಸೋಮವಾರ ದಾಖಲಾಗಿವೆ ಎಂದು ದೆಹಲಿ ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ. ಕಳೆದ ಐದು ದಿನಗಳಲ್ಲಿ ದೆಹಲಿಯಲ್ಲಿ ಮಾರಣಾಂತಿಕ ವೈರಸ್‌ನಿಂದ 823 ಜನರು ಬಲಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಭಾನುವಾರದಂದು ದೆಹಲಿಯ ದೈನಂದಿನ ಕೋವಿಡ್-19 ಸಂಖ್ಯೆಯಲ್ಲಿ 25,462 ಹೊಸ ಪ್ರಕರಣಗಳೊಂದಿಗೆ ಅತಿದೊಡ್ಡ ಜಿಗಿತವನ್ನು ಕಂಡಿತ್ತು. ಅಲ್ಲದೆ ಪಾಸಿಟಿವಿಟಿ ಪ್ರಮಾಣವೂ ಶೇ.29.74ಕ್ಕೆ ಏರಿದೆ. ಕೊರೊನಾಗೆ 161 ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ವರದಿ ಮಾಡಿದ್ದರು.

ಶನಿವಾರ ಕೂಡಾ ದೆಹಲಲಿಯಲ್ಲಿ 24,375 ಕೋವಿಡ್-19 ಪ್ರಕರಣಗಳು ಮತ್ತು 167 ಸಾವುಗಳು ವರದಿಯಾಗಿವೆ. ಅದೇ ರೀತಿ ಶುಕ್ರವಾರ 141 ಮತ್ತು ಗುರುವಾರ 112 ಕೊರೊನಾ ಸಾವುಗಳು ಸಂಭವಿಸಿವೆ.

ಹೊಸ ಪ್ರಕರಣಗಳೊಂದಿಗೆ ರಾಷ್ಟ್ರ ರಾಜಧಾನಿಯ ಒಟ್ಟು ಪ್ರಕರಣಗಳ ಸಂಖ್ಯೆ 8,77,146ಕ್ಕೆ ಏರಿದ್ದು, ಹೆಲ್ತ್ ಬುಲೆಟಿನ್ ಪ್ರಕಾರ ಒಟ್ಟು ಸಾವಿನ ಸಂಖ್ಯೆ 12,361 ಆಗಿದೆ. ಸೋಮವಾರ ದಿನ 68,778 ಆರ್‌ಟಿ-ಪಿಸಿಆರ್ ಪರೀಕ್ಷೆಗಳು ಮತ್ತು 21918 ಕ್ಷಿಪ್ರ ಆಂಟಿಜೆನ್ ಪರೀಕ್ಷೆಗಳು ಸೇರಿದಂತೆ ಒಟ್ಟು 90,696 ಪರೀಕ್ಷೆಗಳನ್ನು ನಡೆಸಲಾಗಿದೆ.

ದೆಹಲಿಯಲ್ಲಿ ಇದುವರೆಗೆ 7.87 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಸೋಮವಾರ 74,941 ರಿಂದ 76,887ಕ್ಕೆ ಏರಿದೆ ಎಂದು ಬುಲೆಟಿನ್ ಹೇಳಿದೆ. ಹೋಂ ಐಸೋಲೇಷನ್ ಅಡಿಯಲ್ಲಿರುವವರ ಸಂಖ್ಯೆ ಭಾನುವಾರ 34,938 ರಿಂದ 37,337ಕ್ಕೆ ಏರಿಕೆಯಾಗಿದೆ, ಆದರೆ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 13,259 ರಿಂದ 15,039 ಕ್ಕೆ ಏರಿದೆ.

ದೆಹಲಿಯಲ್ಲಿ ಕೊರೊನಾ ವೈರಸ್ ರೋಗಿಗಳಿಗೆ ಲಭ್ಯವಿರುವ ಒಟ್ಟು 18,231 ಹಾಸಿಗೆಗಳಲ್ಲಿ ಇನ್ನೂ 3,016 ಹಾಸಿಗೆಗಳು ಖಾಲಿ ಇವೆ ಎಂದು ಆರೋಗ್ಯ ಇಲಾಖೆಯ ವರದಿಯಲ್ಲಿ ತಿಳಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img