Monday, May 10, 2021
Homeಸುದ್ದಿ ಜಾಲ'ಕೊರೊನಾ' ಸಿಕ್ಕರೆ ದೇವೇಂದ್ರ ಫಡ್ನವಿಸ್ ಬಾಯಿಗೆ ಹಾಕುತ್ತೇನೆ: ಶಿವಸೇನಾ ಶಾಸಕ

ಇದೀಗ ಬಂದ ಸುದ್ದಿ

‘ಕೊರೊನಾ’ ಸಿಕ್ಕರೆ ದೇವೇಂದ್ರ ಫಡ್ನವಿಸ್ ಬಾಯಿಗೆ ಹಾಕುತ್ತೇನೆ: ಶಿವಸೇನಾ ಶಾಸಕ

ಮುಂಬೈ, ಏಪ್ರಿಲ್ 19: ‘ಕೊರೊನಾವೈರಸ್ ಸಿಕ್ಕರೆ ದೇವೇಂದ್ರ ಫಡ್ನವಿಸ್ ಬಾಯಿಗೆ ಹಾಕುತ್ತೇನೆ’ ಎಂದು ಶಿವಸೇನಾ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ರೆಮ್‌ಡೆಸಿವಿರ್ ಚುಚ್ಚುಮದ್ದು ಪೂರೈಕೆ ವಿಷಯದಲ್ಲಿ ವಿವಾದ ಉಂಟಾಗಿರುವ ಬೆನ್ನಲ್ಲೇ ಶಿವಸೇನೆಯ ಶಾಸಕ ಸಂಜಯ್ ಗಾಯಕ್ವಾಡ್ ನೀಡಿರುವ ಹೇಳಿಕೆ ಮತ್ತೊಂದು ವಿವಾದ ಸೃಷ್ಟಿಸಿದೆ.

ಇಂತಹ ಪರಿಸ್ಥಿತಿಯಲ್ಲಿ ಸಚಿವರನ್ನು ಬೆಂಬಲಿಸುವುದು ಬಿಟ್ಟು ಬಿಜೆಪಿ ನಾಯಕರು ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ ಹಾಗೂ ಈ ಸರ್ಕಾರ ಹೇಗೆ ವಿಫಲವಾಗಲಿದೆ.

ಎಂಬುದನ್ನು ನೋಡುತ್ತಿದ್ದಾರೆ. ಆದ್ದರಿಂದ ಕೊರೋನಾ ವೈರಸ್ ಕಾಣುವಂತಿದ್ದಿದ್ದರೆ ನಾನು ಅದನ್ನು ದೇವೇಂದ್ರ ಫಡ್ನವಿಸ್ ಅವರ ಬಾಯೊಳಗೆ ಹಾಕುತ್ತಿದ್ದೆ ಎಂದು ಸಂಜಯ್ ಗಾಯಕ್ವಾಡ್ ಹೇಳಿದ್ದಾರೆ.

ಶಿವಸೇನೆ ಶಾಸಕನ ಹೇಳಿಕೆಗೆ ವಿಪಕ್ಷಗಳಿಂದ ಪ್ರತಿಭಟನೆ ವ್ಯಕ್ತವಾಗಿದೆ. ರೆಮ್‌ಡೆಸಿವಿರ್ ಚಚ್ಚು ಮದ್ದನ್ನು ಅತಿ ಹೆಚ್ಚು ಸಂಗ್ರಹ ಮಾಡಿಕೊಂಡ ಔಷಧ ಕಂಪನಿಯ ಮಾಲಿಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದನ್ನು ಫಡ್ನವಿಸ್ ವಿರೊಧಿಸಿದ್ದರು. ಮಾಜಿ ಮುಖ್ಯಮಂತ್ರಿಗಳ ನಡೆ ಆಡಳಿತ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದೆ.

ಶಾಸಕ ಸಂಜಯ್ ಗಾಯಕ್ವಾಡ್ ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ್ದು, ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿದ್ದರೆ, ಸಾಂಕ್ರಾಮಿಕ ಎದುರಾಗಿರುವ ಇಂತಹ ಪರಿಸ್ಥಿತಿಯಲ್ಲಿ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img