Monday, May 10, 2021
Homeಸುದ್ದಿ ಜಾಲಕೇಂದ್ರ ಸರ್ಕಾರದಿಂದ ಆರೋಗ್ಯ ಕಾರ್ಯಕರ್ತರಿಗೆ ಬಿಗ್ ಶಾಕ್

ಇದೀಗ ಬಂದ ಸುದ್ದಿ

ಕೇಂದ್ರ ಸರ್ಕಾರದಿಂದ ಆರೋಗ್ಯ ಕಾರ್ಯಕರ್ತರಿಗೆ ಬಿಗ್ ಶಾಕ್

ನವದೆಹಲಿ : ಕೇಂದ್ರ ಸರ್ಕಾರವು ಆರೋಗ್ಯ ಕಾರ್ಯಕರ್ತರಿಗೆ ಬಿಗ್ ಶಾಕ್ ನೀಡಿದ್ದು, ಕೊರೊನಾ ಸೋಂಕಿತರ ಆರೈಕೆ ಸಂದರ್ಭದಲ್ಲಿ ಮೃತಪಟ್ಟ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ. ವಿಮೆ ಸೌಲಭ್ಯವನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಂಡಿದೆ.

ಈ ಕುರಿತು ಎಲ್ಲಾ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣೆ ಪತ್ರ ಬರೆದಿದ್ದು, 2020 ರ ಮಾರ್ಚ್ 20 ರಂದು ಘೋಷಣೆಯಾಗಿದ್ದ ಕೊರೊನಾ ಸೋಂಕಿತರ ಆರೈಕೆ ಸಂದರ್ಭದಲ್ಲಿ ಮೃತಪಟ್ಟ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ. ವಿಮೆ ಸೌಲಭ್ಯವನ್ನು 2021 ರ ಮಾರ್ಚ್ 24 ರಂದು ಅಂತ್ಯವಾಗಿದ್ದು, ಈ ದಿನಾಂಕಕ್ಕೆ ಮೊದಲು ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಕುಟುಂಬಗಳು ಸೌಲಭ್ಯ ಪಡೆಯಲು ಒಂದು ತಿಂಗಳು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಈವರೆಗೆ ಒಟ್ಟು 287 ಕುಟುಂಬಗಳಿಗೆ ವಿಮೆ ಹಣ ನೀಡಲಾಗಿದ್ದು, ಮಾರ್ಚ್ 24 ಕ್ಕೆ ಮೊದಲು ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಕುಟುಂಬಗಳು ಸೌಲಭ್ಯ ಪಡೆಯಲು ಕೇಂದ್ರದಿಂದ ಒಂದು ತಿಂಗಳು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img