Tuesday, May 11, 2021
Homeಸುದ್ದಿ ಜಾಲಖರೀದಿ ಮಾಡುವವರಿಗೆ ಶಾಕ್ : ಒಂದು ತಿಂಗಳಲ್ಲಿ ಚಿನ್ನದ ದರ 3000 ರೂ ಏರಿಕೆ

ಇದೀಗ ಬಂದ ಸುದ್ದಿ

ಖರೀದಿ ಮಾಡುವವರಿಗೆ ಶಾಕ್ : ಒಂದು ತಿಂಗಳಲ್ಲಿ ಚಿನ್ನದ ದರ 3000 ರೂ ಏರಿಕೆ

ನವದೆಹಲಿ : ಚಿನ್ನದ ಆಭರಣಗಳ ಬೆಲೆ ದಿನದಿಂದ ದಿನಕ್ಕೆ ಕೊಂಚ ಕೊಂಚವೇ ಏರಿಕೆಯಾಗುತ್ತಿದ್ದು, ಇದೀಗ ಒಂದು ತಿಂಗಳಲ್ಲಿ ಚಿನ್ನದ ದರ 3000 ರೂಪಾಯಿ ಏರಿಕೆಯಾಗಿದೆ.

ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯಿಂದಾಗಿ ಚಿನ್ನದ ದರ ಏರಿಕೆಯಾಗಬಹುದು ಎಂದು ಹೇಳಲಾಗಿದೆ.

ಏಪ್ರಿಲ್ ತಿಂಗಳಿನಲ್ಲಿ ಚಿನ್ನದ ದರ 10 ಗ್ರಾಂಗೆ 3000 ರೂ. ಹೆಚ್ಚಳವಾಗಿದೆ. ತಿಂಗಳ ಆರಂಭದಲ್ಲಿ 44,000 ರೂಪಾಯಿ ಇದ್ದ ಚಿನ್ನ ದರ 47,350 ರೂ.ಗೆ ತಲುಪಿದೆ. ಬೆಂಗಳೂರಲ್ಲಿ 22 ಕ್ಯಾರಟ್ ಚಿನ್ನದ ದರ 10 ಗ್ರಾಂಗೆ 44,150 ರೂ., 24 ಕ್ಯಾರಟ್ ಚಿನ್ನದ ದರ 48,150 ರೂ.ಗೆ ತಲುಪಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img