Monday, May 10, 2021
Homeಜಿಲ್ಲೆವಿಜಯಪುರಐಪಿಎಲ್ ಬೆಟ್ಟಿಂಗ್ : 8 ಮಂದಿ ಅರೆಸ್ಟ್, 16 ಮೊಬೈಲ್, 92 ಸಾವಿರ ನಗದು ವಶ

ಇದೀಗ ಬಂದ ಸುದ್ದಿ

ಐಪಿಎಲ್ ಬೆಟ್ಟಿಂಗ್ : 8 ಮಂದಿ ಅರೆಸ್ಟ್, 16 ಮೊಬೈಲ್, 92 ಸಾವಿರ ನಗದು ವಶ

ವಿಜಯಪುರ :  ಸಿಇಎನ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐಪಿಎಲ್ ಬೆಟ್ಟಿಂಟನಲ್ಲಿ ತೊಡಗಿದವರ ಮೇಲೆ ಧಾಳಿ ನಡೆಸಿ 8 ಜನರನ್ನು ಬಂಧಿಸಿ 16 ಮೊಬೈಲ್, ರೂ. 92810 ನಗದು ವಶಕ್ಕೆ ಪಡೆದಿದ್ದಾರೆ.

ವಿಜಯಪುರ ಸಿಇಎನ್ ಸಿಪಿಐ ಸುರೇಶ ಬೆಂಡೆಗುಂಬಳ ಮತ್ತು 17 ಜನರ ತಂಡದಿಂದ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಡಿಸಿಸಿ ಬ್ಯಾಂಕ್ ಎದುರು ಇರುವ ರೋಹಿತ ಶಹಾ ಎಂಬುವರ ಕಾಂಪ್ಲೆಕ್ಸಿನ ಮಹಡಿಯ ಬಳಿ ದಾಳಿ ನಡೆಸಿ ಇಂಡಿ ಪಟ್ಟಣದ ಶಿವಪುತ್ರ , ಚಂದ್ರಾಮ ಬಗಲಿ, ಧರ್ಮು ಉರ್ಫ ಧರ್ಮೇಂದ್ರ ಹುಚ್ಚಪ್ಪ ಹರಿಜನ, ಅಶ್ವಥ ಅಶೋಕ ಬನಸೋಡೆ, ಮಹ್ಮದ ಶಫೀಕ ಶಕೀಲ ಶೇಖ್, ಮಹೇಶ ಭೀಮಪ್ಪ ಆನಂದ, ರಾಹುಲ ಮನೋಹರ ಶೇರಖಾನೆ ಚಡಚಣದ ಸಾಗರ ಸಿದರಾಮ ಸಿಂಧೆ ಉರ್ಫ ಬಾಟ ಎಂಬುವರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.

ನಿನ್ನೆ ರಾತ್ರಿ ನಡೆದ ಮುಂಬಯಿ ಇಂಡಿಯನ್ಸ್ ಮತ್ತು ಹೈದರಾಬಾದ ಸನ ರೈಸರ್ಸ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಗಳು ಮುಂಬಯಿ ಇಂಡಿಯನ್ಸ್ ಗೆದ್ದರೆ ರೂ. 3000 ಗೆ ರೂ. 5000 ,

ಸನ್ ರೈಸರ್ಸ್ ಹೈದರಾಬಾದ ಗೆದ್ದರೆ ರೂ. 4000ಗೆ ರೂ. 7000 ಹಣ ನೀಡುವ ಒಪ್ಪಂದದಂತೆ ಮೊಬೈಲಿನಲ್ಲಿ ಬೆಟ್ಟಿಂಗ್ ವ್ಯವಹಾರ ಕುದುರಿಸುತ್ತಿದ್ದ ಆರೋಪಿಗಳಾಗಿದ್ದು ಮತ್ತೋರ್ವ ಆರೋಪಿ ಯೋಗಿರಾಜ ಉರ್ಫ್ ಯೋಗೀಶ್ ಮನೋಹರ ಶೇರಖಾನೆ ಪರಾರಿಯಾಗಿದ್ದು ವಿಜಯಪುರ ಜಿಲ್ಲೆಯ ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನಾಯಕ ತಂಗಾ

ವಿ ನ್ಯೂಸ್ 24 ಕನ್ನಡ

ವಿಜಯಪುರ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img