Sunday, May 9, 2021
Homeಜಿಲ್ಲೆಬಾಗಲಕೋಟೆಸಾಮಾಜಿಕ ಅಂತರ ಮಾಸ್ಕ್ ಕಡ್ಡಾಯ, ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ದಂಡ ಜೊತೆಗೆ ಶಿಸ್ತಿನ ಕ್ರಮ ಸಾರ್ವಜನಿಕರಿಗೆ...

ಇದೀಗ ಬಂದ ಸುದ್ದಿ

ಸಾಮಾಜಿಕ ಅಂತರ ಮಾಸ್ಕ್ ಕಡ್ಡಾಯ, ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ದಂಡ ಜೊತೆಗೆ ಶಿಸ್ತಿನ ಕ್ರಮ ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆನೀಡಿದ : ಸಿಬಿಐ ಜೆ ಕರುನೇಶಗೌಡ

ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಗರಸಭಾ ಸಭಾಂಗಣದಲ್ಲಿ ಸರ್ಕಾರ ಆದೇಶಿಸಿದ ಕೋವಿಡ  ಮಾರ್ಗಸೂಚಿಯನ್ನು  ಸಾರ್ವಜನಿಕರು ಪಾಲಿಸಲೇಬೇಕು ರಬಕವಿ ಬನಹಟ್ಟಿ ರಾಂಪುರ್ ಹೊಸೂರನಲ್ಲಿ ಇರುವ  ಕಿರಾಣಿ ಸ್ಟೋರ್ ಪಾನ ಶಾಪ್  ಹೋಟೆಲ್ ಖಾನಾವಳಿ ಹೀಗೆ ಮುಂತಾದ ಇರುವ ಮಾಲೀಕರನ್ನು ಕರಿಸಿ ತಿಳುವಳಿಕೆಯ ಮಹತ್ವದ ಸಭೆ ನಡೆಯಿತು.

ಕೋವಿಡ 19  ಸಾಂಕ್ರಾಮಿಕ ರೋಗವು ದೇಶದಾದ್ಯಂತ ಎರಡನೇ ಎಲೆ ಹುಬ್ಬೇರಿಸಿ ಹಬ್ಬುತ್ತಿದೆ ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡಿದೆ. ವಿಶ್ವದಲ್ಲಿ ಕೋವಿಡ 19 ವ್ಯಾಪಕವಾಗಿ ಹರಡುತ್ತಿರುವುದರಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕೋವಿಡ ನಿಯಂತ್ರಣ ಮಾರ್ಗಸೂಚಿ ಪ್ರತಿಯೊಬ್ಬ ಸಾರ್ವಜನಿಕರು ಅನುಸರಿಸಲೇಬೇಕು.

ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ದಂಡ ಜೊತೆಗೆ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬನಹಟ್ಟಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ ಜೆ ಕರುನೇಶಿ ಗೌಡ ಹೇಳಿದರು.

ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತರು  ಶ್ರೀನಿವಾಸ ಜಾದವ ಮಾತನಾಡಿ::: ಕೊರೊನಾದಿಂದ ಇಡೀ ದೇಶದ ಜನತೆ ಕಂಗಾಲಾಗಿದೆ ದಿನದಿಂದ ದಿನಕ್ಕೆ ನಮ್ಮ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚಳ ಆಗುತ್ತಲೇ ಇದೆ ಈ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರ ಆದೇಶವನ್ನು ಪ್ರತಿಯೊಬ್ಬ ಸಾರ್ವಜನಿಕರು ಪಾಲಿಸಲೇಬೇಕು. ಖಾನಾವಳಿ. ಕಿರಾಣಿ ಸ್ಟೋರ. ಹೋಟೆಲ. ಬಟ್ಟೆ  ಅಂಗಡಿಗಳಲ್ಲಿ   ಮಾಸ್ಕ್ ಮತ್ತು  ಸಾಮಾಜಿಕ ಅಂತರ ಕಡ್ಡಾಯವಾಗಿ ಕಲಿಸಬೇಕೆಂದು ಹೇಳಿದರು.

ಮಾನ್ಯ ಬಾಗಲಕೋಟೆ ಜಿಲ್ಲಾ ಅಧಿಕಾರಿಗಳು ಆದೇಶದಂತೆ ಜಾತ್ರೆ. ಸಾರ್ವಜನಿಕರ ಸಭೆ ಸಮಾರಂಭ. ಪ್ರತಿಭಟನೆ. ಮೆರವಣಿಗೆ. ಹೀಗೆ ಮುಂತಾದ ಗುಂಪು ಸೇರುವ ಯಾವುದೇ ಸಮಾರಂಭಗಳು ಮಾಡಬಾರದು.

ಮದುವೆ ಒಳಾಂಗಣದಲ್ಲಿ ನೂರು ಜನ ಮತ್ತು ಹೊರಾಂಗಣದಲ್ಲಿ ಎರಡು ನೂರು ಜನ ಮಾತ್ರ ಇರಬೇಕು ಮತ್ತು  ಉಪವಿಭಾಗ ಅಧಿಕಾರಿಗಳಿಂದ  ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಲೇಬೇಕು.

ಅಂತ್ಯ ಸಂಸ್ಕಾರದ ಸಮಯದಲ್ಲಿ 25 ಜನರಿಗೆ ಮಾತ್ರ ಅವಕಾಶ ಸಿಮಿಂಗ್ ಪೂಲ್ ಮತ್ತು ಜಿಮ್ ಸಂಪೂರ್ಣ ಬಂದ್  . ಸಾರ್ವಜನಿಕ ಸ್ಥಳಗಳಲ್ಲಿ ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ

ಕೆಮ್ಮು ಜ್ವರ ನೆಗಡಿ ಮುಂತಾದ ರೋಗಲಕ್ಷಣಗಳು ಇದ್ದರೆ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ  ಪರೀಕ್ಷೆ ಮಾಡಿಕೊಳ್ಳಬೇಕು. 45 ವರ್ಷದ ಹಿರಿಯ ನಾಗರಿಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು

ಕೋವಿಡ್ ಪಾಸಿಟಿವ್ ಬಂದರೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಮತ್ತು ಮನೆಯಲ್ಲಿ ಆಸಿಲೇಷನ್ ಮಾಡಿಕೊಂಡು ಪ್ರತ್ಯೇಕ ಕೊಠಡಿಯಲ್ಲಿ ಇರಬೇಕು ಇದು ಸರ್ಕಾರದ ಆದೇಶ ಸಾರ್ವಜನಿಕರು ತಪ್ಪದೆ ಆದೇಶವನ್ನು  ಪಾಲಿಸಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭೆಯ ವ್ಯವಸ್ಥಾಪಕರು ಡಾಂಗೆ. ಸೇರಿದಂತೆ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ಪ್ರಕಾಶ ಕುಂಬಾರ

 ವಿ ನ್ಯೂಸ್ 24ಕನ್ನಡ

ಬಾಗಲಕೋಟೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img