Tuesday, May 11, 2021
Homeದೇಶಸೆಪ್ಟೆಂಬರ್ ವೇಳೆಗೆ ಕೋವಾಕ್ಸಿನ್ ಲಸಿಕೆ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಾಗಲಿದೆ : ಸಚಿವ ಹರ್ಷ ವರ್ಧನ್

ಇದೀಗ ಬಂದ ಸುದ್ದಿ

ಸೆಪ್ಟೆಂಬರ್ ವೇಳೆಗೆ ಕೋವಾಕ್ಸಿನ್ ಲಸಿಕೆ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಾಗಲಿದೆ : ಸಚಿವ ಹರ್ಷ ವರ್ಧನ್

ನವದೆಹಲಿ: ಕೊರೋನಾ ಹೆಚ್ಚುತ್ತಿರುವುದರಿಂದ ಸೆಪ್ಟೆಂಬರ್ ವೇಳೆಗೆ ಕೋವಾಕ್ಸಿನ್ ಲಸಿಕೆ ಉತ್ಪಾದನೆಯಲ್ಲಿ 10 ಪಟ್ಟು ಹೆಚ್ಚಾಗಲಿದೆ. ರೆಮ್‌ಡೆಸಿವಿರ್ ತಯಾರಿಕೆಯನ್ನು ಮೇ ವೇಳೆಗೆ ಪ್ರತಿ ತಿಂಗಳಿಗೆ 74.1 ಲಕ್ಷಕ್ಕೆ ದ್ವಿಗುಣಗೊಳಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಭಾನುವಾರ ಹೇಳಿದ್ದಾರೆ.

ಕೋವಿಡ್ ವಿರುದ್ಧ ಹೋರಾಡಲು ರಾಜ್ಯಗಳಿಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡಲಾಗುತ್ತಿದೆ. ನಿರಂತರವಾಗಿ ಆಮ್ಲಜನಕದ ಪೂರೈಕೆ ಮತ್ತು ಆರೋಗ್ಯ ಮೂಲಸೌಕರ್ಯಗಳ ವರ್ಧನೆಯನ್ನು ಖಚಿತಪಡಿಸಲಾಗುತ್ತಿದೆ ಎಂದು ಸರಣಿ ಟ್ವೀಟ್‌ಗಳ ಮೂಲಕ ತಿಳಿಸಿದ್ದಾರೆ.

ರಿಮೆಡೆಸಿವಿರ್ ಅಗತ್ಯವನ್ನು ಪೂರೈಸಲು ಕೈಗೊಂಡಿರುವ ಕ್ರಮಗಳನ್ನು ತಿಳಿಸಿದ ವರ್ಧನ್, ‘ಮೇ ವೇಳೆಗೆ ಉತ್ಪಾದನೆಯನ್ನು ತಿಂಗಳಿಗೆ 74.1 ಲೀಗೆ ದ್ವಿಗುಣಗೊಳಿಸಲಾಗುತ್ತಿದೆ. ಉತ್ಪಾದನೆಯನ್ನು ಹೆಚ್ಚಿಸಲು 20 ಉತ್ಪಾದನಾ ಘಟಕಗಳಿಗೆ ಎಕ್ಸ್‌ಪ್ರೆಸ್ ಅನುಮತಿ ನೀಡಲಾಗಿದೆ. ರಫ್ತು ನಿಷೇಧಿಸಲಾಗಿದ್ದು ಬೆಲೆಗಳನ್ನು ಇಳಿಸಲಾಗಿದೆ. ಕೊರೋನಾ ನಿಗ್ರಹಿಸಲು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದರು.

‘ಭಾರತ ಸರ್ಕಾರ ಮಹಾರಾಷ್ಟ್ರಕ್ಕೆ 1,121, ಉತ್ತರ ಪ್ರದೇಶಕ್ಕೆ 1,700, ಜಾರ್ಖಂಡ್‌ಗೆ 1,500, ಗುಜರಾತ್‌ಗೆ 1,600, ಮಧ್ಯಪ್ರದೇಶಕ್ಕೆ 152 ಮತ್ತು ಛತ್ತೀಸ್‌ಗಢಕ್ಕೆ 230 ವೆಂಟಿಲೇಟರ್‌ಗಳನ್ನು ಒದಗಿಸಿದೆ ಎಂದು ವರ್ಧನ್ ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img