Monday, May 10, 2021
Homeಕೋವಿಡ್-19ದೇಶದಲ್ಲಿ ಕರೋನಾ ಆರ್ಭಟ : ಒಂದೇ ದಿನ ದಾಖಲಾಯ್ತು 2.73 ಲಕ್ಷ ಪಾಸಿಟಿವ್ ಕೇಸ್...!

ಇದೀಗ ಬಂದ ಸುದ್ದಿ

ದೇಶದಲ್ಲಿ ಕರೋನಾ ಆರ್ಭಟ : ಒಂದೇ ದಿನ ದಾಖಲಾಯ್ತು 2.73 ಲಕ್ಷ ಪಾಸಿಟಿವ್ ಕೇಸ್…!

ದೇಶದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಜೋರಾಗಿದ್ದು, ಈ ಮಧ್ಯೆ ಒಂದೇ ದಿನ ದೇಶದಲ್ಲಿ 2.73 ಲಕ್ಷ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ  ಮಾಹಿತಿ ನೀಡಿದ್ದು  ಕಳೆದ 24 ಗಂಟೆಗಳಲ್ಲಿ 2.73,810 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 1,50,61,919ಕ್ಕೆ ಏರಿಕೆಯಾಗಿದೆ  ಇನ್ನು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೋನಾಗೆ 1619 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಕೋವಿಡ್ ಗೆ ಬಲಿಯಾದವರ ಸಂಖ್ಯೆ 1,78,769ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಒಟ್ಟು 19,29,329 ಸಕ್ರಿಯ ಪ್ರಕರಣಗಳಿವೆ, 1,29,53,821 ಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಮದ ಡಿಸ್ಚಾರ್ಜ್ ಆಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img