Sunday, May 9, 2021
Homeಕೋವಿಡ್-19'ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್'ಗೆ ಕೊರೋನಾ ಪಾಸಿಟಿವ್

ಇದೀಗ ಬಂದ ಸುದ್ದಿ

‘ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್’ಗೆ ಕೊರೋನಾ ಪಾಸಿಟಿವ್

ಬೆಳಗಾವಿ : ಈಗಾಗಲೇ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುಟುಂಬದ 8 ಜನರಿಗೆ ಕೊರೋನಾ ಪಾಸಿಟವ್ ಎಂಬುದಾಗಿ ದೃಢಪಟ್ಟಿತ್ತು. ಈ ಬಳಿಕ, ಇಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಶಾಸಕಿ ಲಕ್ಷ್ಮೀ ಹಬ್ಬಾಳ್ಕರ್ ಅವರು, ಪ್ರೀತಿಯ ಎಲ್ಲ ಜನತೆಗೆ.. ನಾನು ಹಾಗೂ‌ ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿ ಕೊರೋನಾ ಸೋಂಕಿನಿಂದ ಹೋಂ ಕ್ವಾರಂಟೈನ್ ಆಗಿದ್ದು, ಆದಷ್ಟು ಬೇಗ ಗುಣಮುಖವಾಗಿ ಎಂದಿನಂತೆ ನಿಮ್ಮ ಜೊತೆ ಬೆರೆಯಲು ನಾನು‌ ಕಾತುರಳಾಗಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ, ಕರೆಗಳ‌ ಮೂಲಕ ಹಾಗೂ ವಾಟ್ಸಪ್ ಗಳಲ್ಲಿ ನಿಮ್ಮೆಲ್ಲರ ಕಾಳಜಿ, ಕನಿಕರ, ಹಾರೈಕೆಗಳಿಗೆ ನನ್ನ ಮನಸ್ಸು ತುಂಬಿ ಬರ್ತಿದೆ. ನಾನು‌ ಈ ಕ್ಷೇತ್ರದ ಶಾಸಕಿಯಾಗಿದ್ದಕ್ಕೆ ಸಾರ್ಥಕವೆನಿಸುತ್ತಿದೆ. ಕ್ಷೇತ್ರದಲ್ಲಿ ನೀವು ದೇವಸ್ಥಾನಗಳಿಗೆ ತೆರಳಿ ಪೂಜೆ, ಪುನಸ್ಕಾರಗಳ‌‌ ಮೂಲಕ ನನ್ನ ಹಾಗೂ ಸಹೋದರನ ಒಳಿತಿಗಾಗಿ ಹಾರೈಸುತ್ತಿರುವುದು ನಮ್ಮ ಪೂರ್ವಜನ್ಮದ ಪುಣ್ಯವೆನಿಸುತ್ತಿದೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಹಾರೈಕೆಗಳ ಮೂಲಕ ಆದಷ್ಟೂ ಬೇಗ ಕ್ಷೇತ್ರಕ್ಕೆ ಮರಳಿ ನಿಮ್ಮ ಜೊತೆ ಬೆರೆಯಲಿದ್ದೇನೆ ಹಾಗೂ ನಿಮ್ಮೆಲ್ಲರ ಹಾರೈಕೆಗಳಿಗೆ ನಾನೆಂದೂ ಚಿರಋಣಿ. ಹೃದಯಸ್ಪರ್ಶಿ ಧನ್ಯವಾದ ಎಂದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img