Tuesday, May 18, 2021
Homeಕೋವಿಡ್-19ನಟಿ ಸಮೀರಾ ರೆಡ್ಡಿ 'ಮಕ್ಕಳಿಗೂ' ಕೊರೊನಾ ಪಾಸಿಟಿವ್

ಇದೀಗ ಬಂದ ಸುದ್ದಿ

ನಟಿ ಸಮೀರಾ ರೆಡ್ಡಿ ‘ಮಕ್ಕಳಿಗೂ’ ಕೊರೊನಾ ಪಾಸಿಟಿವ್

ಮುಂಬೈ : ಬಹುಭಾಷಾ ನಟಿ ಸಮೀರಾ ರೆಡ್ಡಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಇತ್ತೀಚೆಗಷ್ಟೇ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಸಮೀರಾ ರೆಡ್ಡಿಯವರ ಇಬ್ಬರು ಮಕ್ಕಳಿಗೂ ಕೊರೊನಾ ದೃಢಪಟ್ಟಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಹೌದು ಕಳೆದ ವರ್ಷ ಕುಟುಂಬದೊಂದಿಗೆ ಗೋವಾಗೆ ಸ್ಥಳಾಂತರಗೊಂಡ ಸಮೀರಾ ರೆಡ್ಡಿ, ಶನಿವಾರ ತಮಗೆ ಕೊರೊನಾ ಪಾಸಿಟಿವ್ ಬಂದಿದೆ.

ಆದರೆ ಅದೃಷ್ಟವಶಾತ್ ತಮ್ಮ ಅತ್ತೆಗೆ ಕೊರೊನಾ ನೆಗಟಿವ್ ಬಂದಿದೆ ಎಂದು ತಿಳಿಸಿದ್ದರು.ಆದರೆ ಇದೀಗ ಸಮೀರಾ ರೆಡ್ಡಿ ಅವರ ಮಕ್ಕಳಾದ ಹ್ಯಾನ್ಸ್ ಮತ್ತು ನೈರಾ ಇಬ್ಬರಿಗೂ ಕೊರೊನಾ ಪಾಸಿಟಿವ್ ವರದಿ ಬಂದಿದೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.ಹ್ಯಾನ್ಸ್ ಗೆ ಕಳೆದ ವಾರ ತೀವ್ರ ಜ್ವರ, ತಲೆ ನೋವು, ಮೈಕೈ ನೋವು, ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಪರೀಕ್ಷೆ ನಡೆಸಿದ್ದು ಕೊರೊನಾ ದೃಢಪಟ್ಟಿದೆ.

ಅದೇ ರೀತಿ ನೈರಾಗೂ ಕೂಡ ರೋಗದ ಗುಣ ಲಕ್ಷಣಗಳನ್ನು ಕಂಡು ಬಂದಿದ್ದು, ಪರೀಕ್ಷೆ ನಡೆಸಿದಾಗ ಅವಳಿಗೂ ಕೊರೊನಾ ದೃಢಪಟ್ಟಿದೆ.ಸದ್ಯ ಇದೀಗ ಎಲ್ಲರೂ ಹೋಂ ಕ್ವಾರಂಟೈನ್‍ನಲ್ಲಿದ್ದು, ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇವೆ. ಎಲ್ಲರೂ ಶೀಘ್ರವೇ ಗುಣಮುಖರಾಗುತ್ತೇವೆ ಎಂದು ತಿಳಿಸಿದ್ದಾರೆ.ಸಮೀರಾ ರೆಡ್ಡಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಜೋಡಿಯಾಗಿ ವರದನಾಯಕ ಸಿನಿಮಾದಲ್ಲಿ ಅಭಿನಯಿಸಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img