Monday, May 10, 2021
Homeಕೋವಿಡ್-19ಆಕ್ಸಿಜನ್ ಸಿಗದ ಕಾರಣ ಸಚಿವ ಸುರೇಶ್‌ ಕುಮಾರ್‌ 'ಪಿಎ ರಮೇಶ್‌ʼ ಸಾವು..!

ಇದೀಗ ಬಂದ ಸುದ್ದಿ

ಆಕ್ಸಿಜನ್ ಸಿಗದ ಕಾರಣ ಸಚಿವ ಸುರೇಶ್‌ ಕುಮಾರ್‌ ‘ಪಿಎ ರಮೇಶ್‌ʼ ಸಾವು..!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಹೆಚ್ಚಳವಾಗ್ತಿದ್ದು, ಆಕ್ಸಿಜನ್‌ ಕೊರತೆ ಉಂಟಾಗಿದೆ. ಈ ಮಧ್ಯೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವ್ರ ಪಿಎ ರಮೇಶ್‌ ಅವ್ರು ಆಕ್ಸಿಜನ್ ಸಿಗದೆ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ.

ಬೆಂಗಳೂರಿನ ಸೆಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ರಮೇಶ್‌ ಮೃತರಾಗಿದ್ದು, ಸೂಕ್ತ ಸಮಯದಲ್ಲಿ ಆಕ್ಸಿಜನ್‌ ಸಿಗದಿರುವುದೇ ಅವ್ರ ಸಾವಿಗೆ ಕಾರಣ ಎನ್ನಲಾಗ್ತಿದೆ.

ಅಂದ್ಹಾಗೆ, ರಮೇಶ್‌ ಅವರಿಗೆ ಏ. 13ರಂದು ಕೋವಿಡ್‌ ದೃಢಪಟ್ಟಿತ್ತು. ಅವರನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಕಾರಣ, ಸೋಮವಾರ ಬೆಳಿಗ್ಗೆ 9.30ಕ್ಕೆ ಸಾವು ಸಂಭವಿಸಿದೆ.

ಇನ್ನು ಅವ್ರ ಸಾವಿನ ಬಗ್ಗೆ ಪ್ರತಿಕ್ರಿಸಿದ ಸ್ನೇಹಿತರೊಬ್ಬರು, ‘ರಮೇಶ್‌ ಅವರಿಗೆ ಉಸಿರಾಟ ಸಮಸ್ಯೆ ಎದುರಾದಾಗ, ತಕ್ಷಣ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್‌ ಸಿಗಲಿಲ್ಲ. ಆಕ್ಸಿಜನ್‌ ಕೊರತೆಯಿಂದ ಸಾವು ಸಂಭವಿಸಿದೆ. ಸಚಿವರ ಆಪ್ತ ಸಹಾಯಕರಿಗೇ ಆಕ್ಸಿಜನ್‌ ಸಿಗಲಿಲ್ಲ ಎಂದ ಮೇಲೆ ಜನಸಾಮಾನ್ಯರ ಸ್ಥಿತಿ ಏನು’ ಎಂದು ಪ್ರಶ್ನಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img