Tuesday, May 18, 2021
Homeಸುದ್ದಿ ಜಾಲಬೆಳಗಾವಿಯಲ್ಲಿ ಮಹಾ ಸರ್ಕಾರ ಕಲ್ಯಾಣ ಕಚೇರಿ ಸ್ಥಾಪಿಸಬೇಕು : ಸಂಜಯ್ ರಾವತ್

ಇದೀಗ ಬಂದ ಸುದ್ದಿ

ಬೆಳಗಾವಿಯಲ್ಲಿ ಮಹಾ ಸರ್ಕಾರ ಕಲ್ಯಾಣ ಕಚೇರಿ ಸ್ಥಾಪಿಸಬೇಕು : ಸಂಜಯ್ ರಾವತ್

ಮುಂಬೈ: ಮಾರಾಠಿ ಜನರ ಅಭಿವೃದ್ಧಿಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಉದ್ಧವ್ ಠಾಕ್ರೆ ಸರ್ಕಾರವು ಕಲ್ಯಾಣ ಕಚೇರಿ ಸ್ಥಾಪಿಸಬೇಕು. ಇದು ಮರಾಠಿ ಭಾಷೆ ಮಾತನಾಡುವ ಜನರ ಹಕ್ಕನ್ನು ರಕ್ಷಿಸುವ ಜತೆಗೆ, ಕರ್ನಾಟಕ ಸರ್ಕಾರದ ಜತೆ ಸಂಪರ್ಕ ಹೊಂದಲು ಸಹಾಯ ಮಾಡುತ್ತದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

‘ಸಾಮ್ನಾ’ ಪತ್ರಿಕೆಯಲ್ಲಿ ಮಾಹಿತಿ ಹಂಚಿಕೊಂಡ ಅವರು ಮರಾಠಿ ಮಾತನಾಡುವ ಜನರ ಕಲ್ಯಾಣಕ್ಕಾಗಿ ವಿವಾದಿತ ಗಡಿ ಪ್ರದೇಶಗಳಿಗೆ ಮಹಾರಾಷ್ಟ್ರ ಸಮನ್ವಯ ಸಚಿವರಾಗಿರುವ ಏಕನಾಥ್ ಶಿಂಧೆ ಆಗಾಗ್ಗೆ ಭೇಟಿ ನೀಡಬೇಕು ಎಂದು ಅವರು ಕೋರಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಗಡಿ ವಿವಾದ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ವಿರುದ್ಧ ತನ್ನ ನಿಲುವು ಬಲಪಡಿಸಬೇಕು. ರಾಜ್ಯದ ಅಡ್ವೊಕೇಟ್ ಜನರಲ್ ಅವರು ಗಡಿ ಪ್ರದೇಶಗಳಲ್ಲಿ ಮರಾಠಿ ಮಾತನಾಡುವ ಜನರನ್ನು ಭೇಟಿ ಮಾಡಿ ಪ್ರಕರಣವನ್ನು ಮುನ್ನೆಲೆಗೆ ತರಬೇಕು ಎಂದು ರಾವತ್‌ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img