Monday, May 10, 2021
Homeಅಂತರ್ ರಾಜ್ಯಯಾವುದೇ ಕಾರಣಕ್ಕೂ ರೈತ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ: ನರೇಶ್ ಟೀಕೈತ್

ಇದೀಗ ಬಂದ ಸುದ್ದಿ

ಯಾವುದೇ ಕಾರಣಕ್ಕೂ ರೈತ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ: ನರೇಶ್ ಟೀಕೈತ್

ನವದೆಹಲಿ, ಏಪ್ರಿಲ್ 18: ಯಾವುದೇ ಕಾರಣಕ್ಕೂ ರೈತ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ನರೇಶ್ ಟೀಕೈತ್ ಹೇಳಿದ್ದಾರೆ.

ನಾವು ದೆಹಲಿ ಗಡಿಯಲ್ಲಿ ಪ್ರತಿಭಟನೆ ಆರಂಭಿಸಿ ಐದು ತಿಂಗಳುಗಳು ಕಳೆದಿವೆ, ಸರ್ಕಾರವು ರೈತರ ಕಡೆಗೆ ಗಮನಹರಿಸುತ್ತಿಲ್ಲ, ನಮ್ಮ ಬೇಡಿಕೆಗಳನ್ನು ಇಡೇರಿಸುವ ಮಾತನ್ನೂ ಆಡುತ್ತಿಲ್ಲ, ಹೀಗಾಗಿ ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಹಿಂಪಡೆಯುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

ಮೂರು ಕೃಷಿ ಕಾಯ್ದೆಗಳನ್ನು ಕೈಬಿಟ್ಟು ಸರ್ಕಾರ ರೈತರ ಮನವಿಯನ್ನು ಸ್ವೀಕರಿಸಬೇಕು, ಅಲ್ಲಿಯವರೆಗೂ ಹೋರಾಟ ಮುಂದುವರೆಯಲಿದೆ. ರೈತರು ಬಿಜೆಪಿಗೆ ಮತ ನೀಡಿ ಅಧಿಕಾರಕ್ಕೆ ತಂದಿದೆ ಆದರೆ ಸರ್ಕಾರವು ರೈತರಿಗೆ ಕಷ್ಟವನ್ನೇ ನೀಡುತ್ತಿದೆ.

ರೈತರನ್ನು ಹಗುರವಾಗಿ ತೆಗೆದುಕೊಳ್ಳಬೇಡಿ, ರೈತರು ತಮ್ಮ ಜೀವವನ್ನೇ ತ್ಯಾಗ ಮಾಡುತ್ತಾರೆಯೇ ವಿನಃ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ. ದೆಹಲಿಯ ಸಿಂಘು, ಟಿಕ್ರಿ, ಘಾಜಿಪುರ ಗಡಿಯಲ್ಲಿ ಕಳೆದ ಐದು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡುವಂತೆ ಹಲವು ರಾಜಕೀಯ ಮುಖಂಡರುಗಳು ಮನವಿ ಮಾಡಿದ್ದರು

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img