Tuesday, May 18, 2021
Homeಸುದ್ದಿ ಜಾಲಕಲ್ಯಾಣ ಮಂಟಪ ,ಸಮುದಾಯ ಭವನದಲ್ಲಿ ಹೆಚ್ಚು ಜನರನ್ನ ಸೇರಿಸಿದ್ರೆ ಕಠಿಣ ಕ್ರಮ : ಸಚಿವ ಸುರೇಶ್...

ಇದೀಗ ಬಂದ ಸುದ್ದಿ

ಕಲ್ಯಾಣ ಮಂಟಪ ,ಸಮುದಾಯ ಭವನದಲ್ಲಿ ಹೆಚ್ಚು ಜನರನ್ನ ಸೇರಿಸಿದ್ರೆ ಕಠಿಣ ಕ್ರಮ : ಸಚಿವ ಸುರೇಶ್ ಕುಮಾರ್

 ಬೆಂಗಳೂರು.ಏ.18 :  ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹೆಚ್ಚಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂದು ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣ, ವಲಯವಾರು ಅಧಿಕಾರಿಗಳು, ಕಲ್ಯಾಣ ಮಂಟಪದ ಮಾಲೀಕರು ಹಾಗೂ ಖಾಸಗಿ ಆಸ್ಪತ್ರೆ ಮಾಲೀಕರು ಹಾಜರಿದ್ದು ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ‌ ನಡೆಸಲಾಯಿತು. ಸಭೆ ಬಳಿಕ ಮಾತನಾಡಿದ ಬೊಮ್ಮನಹಳ್ಳಿ ಹಾಗೂ ಆನೇಕಲ್ ವಲಯ ಕೊರೊನಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುವಂತಹ ಸ್ಥಳಗಳಾದ ಸಮುದಾಯ ಭವನ, ಕಲ್ಯಾಣ ಮಂಟಪದ ಮಾಲೀಕರನ್ನು ಇಂದು ಸಭೆಗೆ ಕರೆದು ಎಚ್ಚರಿಕೆಯನ್ನ ನೀಡಲಾಗಿದೆ.

ಮದುವೆಗಳಿಗೆ ಸಮಾರಂಭಗಳಿಗೆ ಹೆಚ್ಚು ಜನ ಜಮಾಯಿಸುತ್ತಿದ್ದು ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಮರೆತು  ಯಾವುದೇ ಕೊರೊನಾ ನಿಯಮ ಪಾಲನೆ ಮಾಡುತ್ತಿಲ್ಲ. ಸಮುದಾಯ ಭವನ ಹಾಗೂ ಕಲ್ಯಾಣ ಮಂಟಪಗಳಲ್ಲಿ ನಿಗದಿತ ಜನರಿಗಿಂತ ಹೆಚ್ಚು ಜನರು ಸೇರಿಕೊಳ್ಳದ ಹಾಗೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಅತಿ ಹೆಚ್ಚು ಜನ ಕಂಡು ಬಂದರೆ ಅದಕ್ಕೆ ಮಾಲೀಕರೇ ನೇರ ಹೊಣೆಯಾಗಿರುತ್ತಾರೆ. ಮಾಸ್ಕ್ ಧರಿಸದೆ ಜನರು ಓಡಾಟ ಮಾಡುತ್ತಿದ್ದರೆ ಕೊರೊನಾ ತಡೆಯಲು ಸಾಧ್ಯವಿಲ್ಲ ಕೊರೊನಾ ಕಂಟ್ರೋಲ್ಗೆ ಎಲ್ಲರ ಸಹಕಾರ ಕೂಡ ಅತ್ಯವಶ್ಯಕವಾಗಿದೆ. ನಾಳೆ ಬೆಂಗಳೂರು ನಗರದ ಎಲ್ಲಾ ಶಾಸಕರ ಹಾಗೂ ಪರಿಷತ್ ಸದಸ್ಯರ ಸಭೆಯನ್ನು ಸರ್ಕಾರ ಕರೆದಿದೆ.

ಮುಂದಿನ ದಿನಗಳಲ್ಲಿ ಯಾವೆಲ್ಲ ರೀತಿಯಲ್ಲಿ ಕೊರೊನಾ ನಿಯಂತ್ರಣ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಚರ್ಚಿಸಿ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ಲಾಕ್ಡೌನ್ ಮಾಡುವುದು ಸರ್ಕಾರದ ಉದ್ದೇಶವಲ್ಲ ಆದರೆ ಜನರು ಇದೇ ರೀತಿ ಮಾಸ್ಕ್ ಧರಿಸಿದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ ಕೊರೊನಾ ಸೋಂಕು ಹರಡಲು ದಾರಿಮಾಡಿಕೊಟ್ಟರೇ ಅನಿವಾರ್ಯವಾಗುತ್ತದೆ. ರಾಜ್ಯದ ಗಡಿಭಾಗಗಳಲ್ಲಿ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ಇನ್ನಷ್ಟು ಕಟ್ಟೆಚ್ಚರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img