Tuesday, May 18, 2021
Homeಸುದ್ದಿ ಜಾಲಭೂತಾನಹಳ್ಳಿ ಕೆರೆಯಲ್ಲಿದ್ದ ಮೊಸಳೆ ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರವಾನೆ

ಇದೀಗ ಬಂದ ಸುದ್ದಿ

ಭೂತಾನಹಳ್ಳಿ ಕೆರೆಯಲ್ಲಿದ್ದ ಮೊಸಳೆ ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರವಾನೆ

ಆನೇಕಲ್.ಏ.18 : ಬನ್ನೇರುಘಟ್ಟ ಸಮೀಪದ ಭೂತಾನಹಳ್ಳಿ ಗ್ರಾಮದ ಕೆರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಮೊಸಳೆಯೊಂದು ಕಾಣಿಸಿಕೊಳ್ಳುತ್ತಿತ್ತು. ಹಸು ಹಾಗೂ ಕುರಿ-ಮೇಕೆ ಮೇಯಿಸಲು ಹೋದ ಕುರಿಗಾಹಿಗಳು ಮೊಸಳೆ ಕೆರೆಯಲ್ಲಿ ಇರುವುದನ್ನು ನೋಡಿ ಹಲವಾರು ಬಾರಿ ಗ್ರಾಮಸ್ಥರಿಗೆ ತಿಳಿಸಿದ್ದರು. ಗ್ರಾಮಸ್ಥರು ಹಾಗೂ ಮುಖಂಡರೆಲ್ಲರೂ ಸೇರಿ ಸ್ಥಳೀಯರಿಗೆ ಮೊಸಳೆ ತೊಂದರೆ ಕೊಡಬಹುದು ಎನ್ನುವ ನಿಟ್ಟಿನಲ್ಲಿ ಮೊಸಳೆಯನ್ನು ಹಿಡಿದು ಬನ್ನೇರುಘಟ್ಟಕ್ಕೆ ಬಿಡುವಂತೆ ಅರಣ್ಯ ಇಲಾಖೆಯವರ ಬಳಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳ ತಂಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಇಂದು ಭೂತಾನಹಳ್ಳಿ ಕೆರೆಗೆ ಭೇಟಿ ನೀಡಿ ಕೆರೆಯಲ್ಲಿದ್ದ ಮೊಸಳೆಯನ್ನು ಹಿಡಿದು ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪುನರ್ವಸತಿ ಕೇಂದ್ರಕ್ಕೆ ಬಿಟ್ಟಿದ್ದಾರೆ. ಸದ್ಯ ಮೊಸಳೆ ಆರೋಗ್ಯವಾಗಿದೆ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img