Monday, May 10, 2021
Homeಸುದ್ದಿ ಜಾಲನೂತನ ವಾಹನ ಖರೀದಿ ಸೇರಿದಂತೆ ವಾಹನ ಸಂಬಂಧಿ ವ್ಯವಹಾರಕ್ಕೆ ಆಧಾರ್ ಕಡ್ಡಾಯ

ಇದೀಗ ಬಂದ ಸುದ್ದಿ

ನೂತನ ವಾಹನ ಖರೀದಿ ಸೇರಿದಂತೆ ವಾಹನ ಸಂಬಂಧಿ ವ್ಯವಹಾರಕ್ಕೆ ಆಧಾರ್ ಕಡ್ಡಾಯ

ನವದೆಹಲಿ : ವಾಹನ ಸಂಬಂಧಿ ವ್ಯವಹಾರಕ್ಕೆ ಆಧಾರ್ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ನೂತನ ವಾಹನ ಖರೀದಿ, ನೋಂದಣಿ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಿಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ.

ಕೇಂದ್ರ ಸರ್ಕಾರದ ಆದೇಶದ ಪ್ರಕಾರ, ಇನ್ಮುಂದೆ ಆಧಾರ್ ನೊಂದಿಗೆ ಸಂಯೋಜನೆಯಾದ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನೆಯಾದ ಬಳಿಕವಷ್ಟೇ ವಾಹನ ಸಂಬಂಧಿ ವ್ಯವಹಾರಗಳು ಪೂರ್ಣಗೊಳ್ಳಲಿವೆ. ಈ ಮೂಲಕ ಒಬ್ಬ ವ್ಯಕ್ತಿಯ ಬಳಿ ಎಷ್ಟು ವಾಹನಗಳಿವೆ ಎಂಬ ಮಾಹಿತಿ ಸರ್ಕಾರಕ್ಕೆ ಸುಲಭವಾಗಿ ಲಭ್ಯವಾಗಲಿವೆ.

ವಾಹನ ಚಾಲನೆ ಪರವಾನಗಿ, ವಾಹನ ನೋಂದಣಿ, ಕಲಿಕಾ ಪರವಾನಗಿ, ವಾಹನ ಚಾಲನಾ ಪರವಾನಗಿಯ ನವೀಕರಣ, ಡಬಲ್ ಡ್ರೈವಿಂಗ್ ಲೈಸೆನ್ಸ್, ವಾಹನ ಚಾಲನಾ ಪರವಾನಗಿಯಲ್ಲಿನ ವಿಳಾಸ ಮತ್ತು ಇನ್ನಿತರ ಬದಲಾವಣೆ, ಅಂತಾರಾಷ್ಟ್ರೀಯ ವಾಹನ ಚಾಲನೆ ಪರವಾನಗಿ, ವಾಹನಗಳ ತಾತ್ಕಾಲಿಕ ನೋಂದಣಿಗೆ ಆಧಾರ್ ಕಡ್ಡಾಯ ಮಾಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img