Tuesday, May 18, 2021
Homeಸುದ್ದಿ ಜಾಲ‘ ಸಿರಿ ಕನ್ನಡ’ ವಾಹಿನಿಯ ವಿನೂತನ ಕಾರ್ಯಕ್ರಮಗಳು

ಇದೀಗ ಬಂದ ಸುದ್ದಿ

‘ ಸಿರಿ ಕನ್ನಡ’ ವಾಹಿನಿಯ ವಿನೂತನ ಕಾರ್ಯಕ್ರಮಗಳು

ಪ್ರಸ್ತುತ ಮನರಂಜನಾ ವಾಹಿನಿಯಾಗಿರುವ ಸಿರಿ ಕನ್ನಡ ಹೊಸ ಕಾರ್ಯಕ್ರಮಗಳನ್ನು ರೂಪಿಸುವುದರ ಮೂಲಕ ಕನ್ನಡಿಗರ ಮನೆ ಮನಗಳನ್ನು ತಲುಪುವ ದಿಶೆಯಲ್ಲಿ ಹೆಜ್ಜೆ ಹಾಕಿದೆ.

ರಿಯಾಲಿಟಿ ಶೋ, ಅಧ್ಯಾತ್ಮಿಕ ಹೊರತುಪಡಿಸಿ, ಒಂದಷ್ಟು ಹೊಸ ರೀತಿಯ ವಿನೂತನ ಧಾರವಾಹಿ, ಹಾಗೂ ಎಲ್ಲರೂ ಇಷ್ಟಪಡುವಂತಹ ಎಂಟು ಕಾರ್ಯಕ್ರಮಗಳನ್ನು ವಾಹಿನಿ ಸಿದ್ದಪಡಿಸಿದೆ.

ಮೊದಲನೆಯದಾಗಿ ಮಠ ಮಾನ್ಯಗಳ ದರ್ಶನ ನೀಡುವ ‘ಧರ್ಮ ದರ್ಶನ’ ಕಾರ್ಯಕ್ರಮವು ಬೆಳಿಗ್ಗೆ 7.30ಕ್ಕೆ ಪ್ರಸಾರವಾಗಲಿದೆ. ಎರಡನೆಯದು 12.30ರಲ್ಲಿ ’ಸಿರಿಭೋಜನ’ ನಟಿ ಸನಾತನಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಹೆಸರು ಮಾಡಿರುವ ಅಡುಗೆ ಪರಿಣಿತರು ಭಾಗವಹಿಸಲಿದ್ದು, ಉತ್ತಮ ಆರೋಗ್ಯ ನಿರ್ವಹಣೆಗಾಗಿ ಆಯುರ್ವೇದ ಅಡುಗೆಯ ಅಂಶಗಳನ್ನು ತಿಳಿಸಿಕೊಡಲಿದ್ದಾರೆ. ಮೂರನೆಯದು ನಟಿ,ನಿರೂಪಕಿ ರಜನಿ ನಡೆಸಿಕೊಡುವ ’ನಾರಿಗೊಂದು ಸೀರೆ’ ಮಧ್ಯಾಹ್ನ 1.30ಕ್ಕೆ ಹೊಸ ರೂಪದಲ್ಲಿ ಬರಲಿದೆ. ನಾಲ್ಕನೆಯದರಲ್ಲಿ ಉತ್ತರ ಕರ್ನಾಟಕದ ಸೊಗಡು ಸಾರುವ ’ಧಾರವಾಡದಾಗೊಂದು ಲವ್ ಸ್ಟೋರಿ’ ಕಂತುಗಳನ್ನು ಪೃಥ್ವಿರಾಜ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲಿನ ಸ್ಥಳೀಯ ಕಲಾವಿದರುಗಳಿಗೆ ಅವಕಾಶ ಮಾಡಿಕೊಟ್ಟಿರುವುದು ವಿಶೇಷ.

ಈ ಎಲ್ಲಾ ಎಪಿಸೋಡ್‌ಗಳನ್ನು ರಾತ್ರಿ 7 ಗಂಟೆಗೆ ವೀಕ್ಷಿಸಬಹುದು.

ಐದನೆಯದರಲ್ಲಿ ನಟ,ನಿರ್ಮಾಪಕ, ನಿರ್ದೇಶಕ  ಹುಚ್ಚ ವೆಂಕಟ್ ನಿರೂಪಕರಾಗಿರುವ  ’ಲೈಫು ಓಕೆ’ ರಿಯಾಲಿಟಿ ಶೋ ರಾತ್ರಿ 7.30ಕ್ಕೆ ಬರಲಿದ್ದು, ಕಿರುತೆರೆ ಕಲಾವಿದ ಮುರಳಿ ಮುನ್ನಡೆಸುವರು. ಆರನೆಯದು ’ಕಲ್ಪನ’ ಹಾರರ್ ಪ್ರೀತಿ ಕತೆ ಹೊಂದಿರುವ ಧಾರವಾಹಿಯನ್ನು ಸುಶೀಲ್‌ಮೊಕಾಶಿ ನಿರ್ದೇಶಿಸಲಿದ್ದು, ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಏಳರಲ್ಲಿ ಹಿರಿಯ ನಟಿ ಅಪರ್ಣ ನಿರೂಪಣೆಯಲ್ಲಿ ’ಸಿಂಪಲ್ಲಾಗ್ ಒಂದ್ ಸಿನಿಮಾ ಕಥೆ’ ರಾತ್ರಿ 9ಕ್ಕೆ ನೋಡಬಹುದು. ಎಂಟು ಹಾಗೂ ಕೊನೆಯದರಲ್ಲಿ ವಿಸ್ಮಯ, ವಿಚಿತ್ರ ಮತ್ತು ವಿಶೇಷ ಸಂಗತಿಗಳು ಹೇಳುವ ’ನಿಗೂಢ ರಹಸ್ಯ’ ಕಾರ್ಯಕ್ರಮವನ್ನು ಆರ್‌ಜೆ ನಿಖಿಲ್‌ಸ್ವಾಮಿ ನೇತೃತ್ವದಲ್ಲಿ ಮೂಡಿಬರಲಿದೆ. ಇದು ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

ಸೋಮವಾರದಿಂದ ಶುಕ್ರವಾರವರೆಗೆ ಇದೇ ಏಪ್ರಿಲ್ 19ರಿಂದ ವೀಕ್ಷಕರಿಗೆ ಲಭ್ಯವಾಗಲಿವೆ.

’ಸಿರಿ ಕನ್ನಡ’ ವಾಹಿನಿಯು ಈಗ ಪರಿಪೂರ್ಣ ವಾಹಿನಿಯಾಗಿ ಹೊರಹೊಮ್ಮಲಿದ್ದು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಮನರಂಜನೆ ಮುಖ್ಯವಾಗಿಸಿಕೊಳ್ಳಲಿದೆ ಎಂದು ವಾಹಿನಿ ಮುಖ್ಯಸ್ಥ ಸಂಜಯ್‌ಶಿಂಧೆ ಮಾಹಿತಿ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img