Tuesday, May 18, 2021
Homeಸುದ್ದಿ ಜಾಲಜಾಗತಿಕ ಮಟ್ಟದಲ್ಲೂ ಗರಿಷ್ಠ ಏರಿಕೆ ಕಂಡ ಕೊರೋನಾ : ವಿಶ್ವ ಆರೋಗ್ಯ ಸಂಸ್ಥೆ

ಇದೀಗ ಬಂದ ಸುದ್ದಿ

ಜಾಗತಿಕ ಮಟ್ಟದಲ್ಲೂ ಗರಿಷ್ಠ ಏರಿಕೆ ಕಂಡ ಕೊರೋನಾ : ವಿಶ್ವ ಆರೋಗ್ಯ ಸಂಸ್ಥೆ

ಜಿನೀವಾ :ವಿಶ್ವದಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೋನಾ ಆರಂಭವಾದ ಬಳಿಕ ಎರಡು ತಿಂಗಳಿನಿಂದ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಹಿಂದೆ ವ್ಯಾಪಕವಾಗಿ ಸೋಂಕು ಹರಡುವಿಕೆಯನ್ನು ತಡೆಗಟ್ಟಿದ್ದ ಕೆಲ ದೇಶಗಳಲ್ಲೂ ಕೂಡ ಈ ಬಾರಿ ಸೋಂಕು ಹೆಚ್ಚಾಗಿದೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ವಿಶೇಷ ಸಭೆಯಲ್ಲಿ ತಿಳಿಸಿದ್ದಾರೆ .

ಜಾಗತಿಕವಾಗಿ 832 ದಶ ಲಕ್ಷ ಡೋಸ್​ ಕೋವಿಡ್ ಲಸಿಕೆ ವಿವಿಧ ದೇಶಗಳಿಗೆ ಹೋಗಿವೆ. ಕಡಿಮೆ ಆದಾಯದ ದೇಶಗಳಿಗೆ ಶೇ.0.2 ರಷ್ಟು ಮಾತ್ರ ಲಸಿಕೆ ಹಂಚಿಕೆಯಾಗಿವೆ. .

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img