Monday, May 10, 2021
Homeಬೆಂಗಳೂರು"ಮನೆ ಬಾಗಿಲಿಗೆ ಶಾಲೆ" ಯೋಜನೆ : ಹೈಕೋರ್ಟ್ ನ್ಯಾಯಾಧೀಶರಾದ ಶ್ರೀ ಅರವಿಂದ್ ಕುಮಾರ್ ರಿಂದ...

ಇದೀಗ ಬಂದ ಸುದ್ದಿ

“ಮನೆ ಬಾಗಿಲಿಗೆ ಶಾಲೆ” ಯೋಜನೆ : ಹೈಕೋರ್ಟ್ ನ್ಯಾಯಾಧೀಶರಾದ ಶ್ರೀ ಅರವಿಂದ್ ಕುಮಾರ್ ರಿಂದ ಚಾಲನೆ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ  ಇಂದು ಹೈಕೋರ್ಟ್ ನ ಸೆಂಟ್ರಲ್ ಪೋರ್ಟಿಕೊ ಹತ್ತಿರ ಎರಡು “ಮನೆ ಬಾಗಿಲಿಗೆ ಶಾಲೆ” ವಾಹನಗಳಿಗೆ ಮಾನ್ಯ ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಶ್ರೀ. ಆರ್.ವಿ.ರವೀಂದ್ರನ್  ಹಾಗೂ ಮಾನ್ಯ ಹೈಕೋರ್ಟ್ ನ್ಯಾಯಾಧೀಶರಾದ  ಶ್ರೀ ಅರವಿಂದ್ ಕುಮಾರ್, ಮಾನ್ಯ ಆಡಳಿತಗಾರರು ಶ್ರೀ ರಾಕೇಶ್ ಸಿಂಗ್, ಮಾನ್ಯ ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತಾ ರವರು ಚಾಲನೆ ನೀಡಿದರು. ಈ ವೇಳೆ ವಿಶೇಷ ಆಯುಕ್ತರುಗಳಾದ ರೆಡ್ಡಿ ಶಂಕರ ಬಾಬು, ರವೀಂದ್ರ, ಸಹಾಯಕ ಆಯುಕ್ತರು(ಶಿಕ್ಷಣ) ನಾಗೇಂದ್ರ ನಾಯ್ಕ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮನೆ ಬಾಗಿಲಿಗೆ ಶಾಲೆ ವಾಹನಗಳಿಗೆ ಚಾಲನೆ ನೀಡಿದರ ಬಳಿಕ ಮುಖ್ಯ ಆಯುಕ್ತರು ಗೌರವ್ ಗುಪ್ತಾ ರವರು ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ  ಕೋವಿಡ್  ಸೋಂಕು ದೃಡಪಟ್ಟವರೆಲ್ಲರೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯಿಲ್ಲ. ಎಸಿಮ್ಟಮ್ಯಾಟಿಕ್ ಇರುವ ಸೋಂಕಿತರೆಲ್ಲರೂ ಮನೆಯಲ್ಲೇ ಐಸೋಲೇಟ್ ಆಗಿ ಗುಣಮುಖರಾಗಬಹುದು. ಈ ಪೈಕಿ ಶೇ. 80 ರಷ್ಟು ಮಂದಿ ಮನೆಯಲ್ಲೇ ಐಸೋಲೇಟ್ ಆಗಿದ್ದಾರೆ. ಮನೆಯಲ್ಲಿ ಐಸೋಲೇಟ್ ಆಗಲು ವ್ಯವಸ್ಥೆಯಿಲ್ಲದವರು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಉಳಿಯಬಹುದಾಗಿದ್ದು, ಇಂದು ಹೊಸದಾಗಿ 10 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆ ಹಾಗೂ ಹೋಟೆಲ್‌ಗಳು ಸೇರಿ ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳು ಮತ್ತು ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯುತ್ತಿದ್ದು, ದೊಡ್ಡ ದೊಡ್ಡ ಆಸ್ಪತ್ರೆಗಳ ಮೇಲುಸ್ತುವಾರಿಯಲ್ಲಿ ತಾತ್ಕಾಲಿಕ ಆಸ್ಪತ್ರೆಗಳಿಗೆ ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗುವುದು. ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. ಅದರಂತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 150 ಹಾಸಿಗೆಳಿಂದ 500 ಹಾಸಿಗೆಗಳಿಗೆ ಹೆಚ್ಚಳ ಮಾಡಲಾಗುತ್ತಿದ್ದು, ಉಳಿದ ಆಸ್ಪತ್ರೆಗಳಲ್ಲೂ ಹಾಸಿಗೆಗಳ ಲಭ್ಯತೆ ಹೆಚ್ಚಳಮಾಡಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಹಾಸಿಗೆ ಮೀಸಲಿಡಬೇಕು. ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುತ್ತಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ 4,300 ಹಾಸಿಗೆಗಳ ಲಭ್ಯತೆಯಿದೆ ಎಂದು ಹೇಳಿದರು.

ಪಾಲಿಕೆ ಕೇಂದ್ರ ಕಛೇರಿಯಲ್ಲಿರುವ ಕೇಂದ್ರ ವಾರ್ ರೂಂ ಹಾಗೂ ಎಲ್ಲಾ ವಲಯಗಳಲ್ಲಿ ವಿಕೇಂದ್ರಿಕರಿಸರುವ ವಾರ್ ರೂಂಗಳಿಗೆ ಬೆಡ್ ಅಲಾಟ್ಮೆಂಟ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಐಸಿಎಂಆರ್ ಪೋರ್ಟಲ್‌ನಲ್ಲಿ ಸೋಂಕಿತರ ಮಾಹಿತಿ ಲಭ್ಯವಾದ ಬಳಿಕ ಇಂಡೆಕ್ಸ್ ತಂತ್ರಾಶದ ಮೂಲಕ ಸೋಂಕಿತರ ಮಾಹಿತಿ ಪಡೆದು ಸೋಂಕಿತರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ತಿಳಿದುಕೊಂಡು ಹಾಸಿಗೆ ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.

ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಇಂದಿನಿಂದ ಚರಕ ಆಸ್ಪತ್ರೆ ಪ್ರಾರಂಭವಾಗುತ್ತಿದ್ದು, ಐಸಿಯು, ವೆಂಟಿಲೇಟರ್ ಹಾಸಿಗೆಗಳನ್ನು ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಂಗೆ ಮಾಹಿತಿ ಅಳವಡಿಸಲಾಗುವುದು. ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಈ ಸಂಬಂಧ ಕೋವಿಡ್ ಸೋಂಕಿತರಿಗಾಗಿ 7 ವಿದ್ಯುತ್ ಚಿತಾಗಾರಗಳನ್ನು ಹೆಚ್ಚಿಸಲಾಗಿದೆ. ಶವ ಸಾಗಾಣೆ ವಾಹನಗಳನ್ನೂ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img