Monday, May 10, 2021
Homeಸುದ್ದಿ ಜಾಲಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಗಳ ಆಗಮನ

ಇದೀಗ ಬಂದ ಸುದ್ದಿ

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಗಳ ಆಗಮನ

ಬನ್ನೇರುಘಟ್ಟ. ಏ.17 : ಪ್ರಾಣಿ ಪಕ್ಷಿ ಪ್ರಿಯರ ನೆಚ್ಚಿನ ತಾಣವಾಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೂತನ ಅತಿಥಿಗಳ ಆಗಮನವಾಗಿದ್ದು ಸಂಭ್ರಮ ಮನೆಮಾಡಿದೆ. ಪಾರ್ಕ್ನ ಸಿಂಹಿಣಿ ಸನಾ ಜನವರಿ 15 ನೇ ತಾರೀಖಿನಂದು ಎರಡು ಹೆಣ್ಣು ಮರಿಗಳಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮರಿಗಳು ಆರೋಗ್ಯವಾಗಿವೆ. ಮರಿಗಳ ಜನನದಿಂದ ಪಾರ್ಕ್ ನಲ್ಲಿ ಒಟ್ಟು ಸಿಂಹಗಳ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ.

ಜೊತೆಗೆ ಪಾರ್ಕ್ನ ಹುಲಿ ಅನುಷ್ಕಾ ಫೆಬ್ರವರಿ 12 ನೇ ತಾರೀಖಿನಂದು ಎರಡು ಹೆಣ್ಣು ಮರಿಗಳಿಗೆ ಜನ್ಮ ನೀಡಿದ್ದು, ಪಾರ್ಕ್ನಲ್ಲಿ ಒಟ್ಟು ಹುಲಿಗಳ ಸಂಖ್ಯೆ 19 ಕ್ಕೆ ಏರಿಕೆಯಾಗಿದೆ ಸಾರ್ವಜನಿಕರು ಪ್ರಾಣಿಗಳ ಆಹಾರ ಮತ್ತು ಪಶುವೈಧ್ಯಕೀಯ ಆರೈಕೆಗೆ ಕೊಡುಗೆ ನೀಡುವ ಮೂಲಕ ಅವುಗಳನ್ನು ದತ್ತು ಪಡೆಯ ಬಹುದಾಗಿರುತ್ತದೆ. ದತ್ತುಸ್ವೀಕಾರದ ಜೊತೆಗೆ ದತ್ತು ಸ್ವೀಕಾರ ಶುಲ್ಕದ 25% ಅನ್ನು ಹೆಚ್ಚುವರಿಯಾಗಿ ನೀಡುವ ಮೂಲಕ ನಾಗರೀಕರು ತಾವು ದತ್ತು ಪಡೆದ ಪ್ರಾಣಿಗಳಿಗೆ ಹೆಸರಿಡಲು ಅವಕಾಶವನ್ನು ಪಡೆಯಬಹುದಾಗಿರುತ್ತದೆ.

ಪ್ರಾಣಿಗಳನ್ನು ದತ್ತುಪಡೆಯಲು ಮತ್ತು ಅವುಗಳಿಗೆ ಹೆಸರಿಡಲು ಆಸಕ್ತಿಯಿದ್ದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳನ್ನು ಇಮೈಲ್( [email protected] ) ಮೂಲಕ ಸಂಪರ್ಕಿಸಲು ಕೋರಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ಮಾಹಿತಿ ತಿಳಿಸಿದ್ದಾರೆ. ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರಾದ ಉಮಾಶಂಕರ್ ಮಾತನಾಡಿ ಪಾರ್ಕ್ ನಲ್ಲಿ ಹುಲಿ ಹಾಗೂ ಸಿಂಹದ ಹೆಣ್ಣು ಮರಿಗಳು ಜನನವಾಗಿದ್ದು ಖುಷಿ ತಂದಿದೆ.

ಸಿಂಹದ ಮರಿಗಳು ಹಾಗೂ ಹುಲಿ ಮರಿಗಳನ್ನು ಹುಟ್ಟಿದ ದಿನದಿಂದಲೂ ಅವುಗಳ ಮೇಲೆ ಸಾಕಷ್ಟು ಜಾಗರೂಕತೆ ವಹಿಸಲಾಗಿದೆ. ಮರಿಗಳಿಗೆ ಮೇಕೆ ಹಾಲು ಪೌಷ್ಟಿಕಾಂಶದ ಟಾನೀಕ್ ಗಳನ್ನು ನೀಡಿ ಪ್ರಾಣಿ ಪಾಲಕರು ಮರಿಗಳನ್ನು ಜೋಪಾನವಾಗಿ ನೋಡಿಕೊಳ್ಳಲಾಗುತ್ತಿದ್ದಾರೆ ಎಂದು ತಿಳಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img