Tuesday, May 18, 2021
Homeದೆಹಲಿಕೆಂಪುಕೋಟೆ ಮೇಲೆ ಬಾವುಟ ಪ್ರಕರಣ : ನಟ ದೀಪ್ ಸಿಧುಗೆ ಜಾಮೀನು

ಇದೀಗ ಬಂದ ಸುದ್ದಿ

ಕೆಂಪುಕೋಟೆ ಮೇಲೆ ಬಾವುಟ ಪ್ರಕರಣ : ನಟ ದೀಪ್ ಸಿಧುಗೆ ಜಾಮೀನು

ನವದೆಹಲಿ : ಜನವರಿ 26 ಗಣರಾಜ್ಯೋತ್ಸವದ ದಿನ ರೈತ ಸಂಘಟನೆಗಳ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಕೆಂಪು ಕೋಟೆ ಮೇಲೆ ಬಾವುಟ ಹಾರಿಸಿದ್ದ ನಟ ದೀಪ್ ಸಿಧುಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.

ದೀಪ್ ಸಿಧು ಕಳೆದ ವಿಚಾರಣೆ ವೇಳೆ ಜನವರಿ 26 ರಂದು ಕೆಂಪು ಕೋಟೆಗೆ ಹೋಗುವಂತೆ ಆಂದೋಲನ ನಡೆಸುತ್ತಿರುವ ರೈತರಿಗೆ ಯಾವುದೇ ಕರೆ ನೀಡಿಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಪ್ರತಿಭಟನೆಗಾಗಿ ಕರೆ ನೀಡಿದ್ದು ರೈತ ಮುಖಂಡರು, ದೀಪು ಸಿಧು ರೈತ ಸಂಘದ ಸದಸ್ಯರೂ ಅಲ್ಲ, ಸಿಧು ಜನಸಮೂಹವನ್ನು ಸಜ್ಜುಗೊಳಿಸಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ಹಿಂಸಾಚಾರದಲ್ಲಿ ಪಾಲ್ಗೊಂಡಿಲ್ಲ ಎಂದು ದೀಪ್ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನಟ ದೀಪ್ ಸಿಧುಗೆ ಜಾಮೀನು ನೀಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img