Tuesday, May 18, 2021
Homeಕೋವಿಡ್-19ಕೊರೋನಾ ಕುರಿತಾದ ಮತ್ತೊಂದು ಶಾಕಿಂಗ್ ಮಾಹಿತಿ ಬಹಿರಂಗ:ಗಾಳಿಯಲ್ಲೂ ಹರಡುತ್ತೆ ಸೋಂಕು

ಇದೀಗ ಬಂದ ಸುದ್ದಿ

ಕೊರೋನಾ ಕುರಿತಾದ ಮತ್ತೊಂದು ಶಾಕಿಂಗ್ ಮಾಹಿತಿ ಬಹಿರಂಗ:ಗಾಳಿಯಲ್ಲೂ ಹರಡುತ್ತೆ ಸೋಂಕು

ಕೊರೋನಾ ಕುರಿತಾದ ಮತ್ತೊಂದು ಆಘಾತಕಾರಿ ಮಾಹಿತಿ ಅಧ್ಯಯನದಲ್ಲಿ ಗೊತ್ತಾಗಿದೆ. ಕೊರೋನಾ ಸೋಂಕಿಗೆ ಕಾರಣವಾದ ಸಾರ್ಸ್ ಸಿಒವಿ -2 ವೈರಸ್ ಗಾಳಿಯ ಮೂಲಕ ಹೆಚ್ಚಾಗಿ ಪ್ರಸಾರವಾಗುತ್ತದೆ ಎನ್ನುವುದು ಹೊಸ ಅಧ್ಯಯನದಲ್ಲಿ ಗೊತ್ತಾಗಿದೆ.

ಲ್ಯಾನ್ಸೆಟ್ ವೈದ್ಯಕೀಯ ಪತ್ರಿಕೆಯಲ್ಲಿ ಈ ಮಾಹಿತಿ ಪ್ರಕಟಿಸಲಾಗಿದೆ. ದ್ರವ ಕಣಗಳು ಗಾಳಿಯ ಮೂಲಕ ನೆಲಕ್ಕೆ ಬಿದ್ದು ಸೋಂಕು ಸುಲಭವಾಗಿ ಹರಡಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಸಾಕ್ಷ್ಯ ಸಿಕ್ಕಿಲ್ಲ ಎಂದು ಅಮೆರಿಕ, ಬ್ರಿಟನ್, ಕೆನಡಾದ 6 ಮಂದಿ ಸಂಶೋಧಕರು ನಡೆಸಿದ ಅಧ್ಯಯನ ದೃಢಪಡಿಸಿದೆ.

ಗಾಳಿಯಿಂದ ಹರಡುವ ಅಂಶವನ್ನು ಜನತೆ ನಿರ್ಲಕ್ಷಿಸಿದ ಪರಿಣಾಮ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿದೆ ಎಂದು ಸಂಶೋಧಕರು ಹೇಳಿದ್ದಾರೆ. ಪರಿಸರ ವಿಜ್ಞಾನ ಸಂಶೋಧನೆಯ ಸಹಕಾರಿ ಸಂಸ್ಥೆ ಮತ್ತು ಕೊಲರಾಡೋದ ಬೌಲ್ಡರ್ ವಿವಿ ಪ್ರಮುಖ ತಜ್ಞ ಜೋಸ್ ಲೂಯಿಸ್ ಜಿಮೆನೆಜ್ ಬಾಯಿ ಮೂಗಿನಿಂದ ಅಲ್ಲ, ಗಾಳಿಯಿಂದ ವೈರಸ್ ಹರಡುತ್ತದೆ ಎಂದು ತಿಳಿಸಿದ್ದಾರೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ, ಇತರೆ ಆರೋಗ್ಯ ಸಂಸ್ಥೆಗಳು ಗಾಳಿಯಿಂದ ಸೋಂಕು ಹರಡುವುದನ್ನು ತಡೆಯಲು ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಲು ಸಲಹೆ ನೀಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img