Sunday, May 16, 2021
Homeಸುದ್ದಿ ಜಾಲಕೋಡಿಹಳ್ಳಿ ಚಂದ್ರಶೇಖರ್ ಯಾವನು.? ಅವನೊಬ್ಬ 420 : ರೇಣುಕಾಚಾರ್ಯ

ಇದೀಗ ಬಂದ ಸುದ್ದಿ

ಕೋಡಿಹಳ್ಳಿ ಚಂದ್ರಶೇಖರ್ ಯಾವನು.? ಅವನೊಬ್ಬ 420 : ರೇಣುಕಾಚಾರ್ಯ

ದಾವಣಗೆರೆ : ಕೋಡಿಹಳ್ಳಿ ಚಂದ್ರಶೇಖರ್ ಯಾವನು.? ಅವನೊಬ್ಬ 420, ಅವನನ್ನು ಬಿಟ್ಟು ಮಾತುಕತೆಗೆ ಬನ್ನಿ ಎಂದು ಹೇಳಿದ್ದೇನೆ ಎಂಬುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳುವ ಮೂಲಕ, ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೊನ್ನಾಳಿಯಲ್ಲಿ ಮುಷ್ಕರ ನಿರತ ಸಾರಿಗೆ ನೌಕರರಿಂದ ಮನವಿ ಸ್ವೀಕರಿಸಿದ ಬಳಿಕ, ದೂರವಾಣಿ ಮೂಲಕ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರೊಂದಿಗೆ ಪೋನ್ ಮೂಲಕ ಮಾತನಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು.

ಕೋಡಿಹಳ್ಳಿ ಚಂದ್ರಶೇಖರ್ ಕಾಂಗ್ರೆಸ್ ಏಜೆಂಟ್, ಅವನನ್ನು ಬಿಟ್ಟು ಮಾತನಕತೆಗೆ ಬನ್ನಿ. ಮುಷ್ಕರ ವಾಪಾಸ್ ಪಡೆಯಿರಿ. ಕೋವಿಡ್ ಬಂದ ಕಾರಣ, ಸಾಕಷ್ಟು ಆರ್ಥಿಕ ಸಮಸ್ಯೆ ಉಂಟಾಗಿದೆ. ನಾನು ನಿಮ್ಮನ್ನು ಸಚಿವರ ಬಳಿ ಕರೆದುಕೊಂಡು ಹೋಗುತ್ತೇನೆ. ಈಗಿನಿಂದಲೇ ಬಸ್ ಸಂಚಾರ ಮಾಡಿ, ನಾನ್ ಇರುವೆ ಎಂದು ಮುಷ್ಕರ ನಿರತ ಸಾರಿಗೆ ನೌಕರರಿಗೆ ತಿಳಿಸಿದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ನೀವು ಸೇವೆಗೆ ಹಾಜರಾಗಿ, ನಾನು ನಿಮ್ಮ ಪರವಾಗಿ ಬೀದಿಗೆ ಇಳಿಯುತ್ತೇನೆ. ನಿಮ್ಮ ಪರವಾಗಿ ಸರ್ಕಾರದ ವಿರುದ್ಧವಾಗಿಯೂ ಹೋರಾಟ ಮಾಡ್ತಿನಿ. ಆ ಕೋಡಿಹಳ್ಳಿ ಕಾಂಗ್ರೆಸ್ ನವನನ್ನು ಬಿಟ್ಟು ಮೊದಲು ಬನ್ನಿ, ಸಿಎಂ ಯಡಿಯೂರಪ್ಪ ಅವರನ್ನು ನಾನು ಕಾಲು ಹಿಡಿದು ಸಮಸ್ಯೆ ಬಗೆಹರಿಸುತ್ತೇನೆ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img